Select Your Language

Notifications

webdunia
webdunia
webdunia
webdunia

ಕಾಂತಾರ ಅಧ್ಯಾಯ 1 ರ ಫಸ್ಟ್ ಲುಕ್ ನೋಡಲು ಕ್ಷಣಗಣನೆ ಶುರು

ಕಾಂತಾರ ಅಧ್ಯಾಯ 1 ರ ಫಸ್ಟ್ ಲುಕ್ ನೋಡಲು ಕ್ಷಣಗಣನೆ ಶುರು
ಬೆಂಗಳೂರು , ಸೋಮವಾರ, 27 ನವೆಂಬರ್ 2023 (08:40 IST)
ಬೆಂಗಳೂರು: ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸುತ್ತಿರುವ ಬಹುನಿರೀಕ್ಷಿತ ಕಾಂತಾರ ಅಧ‍್ಯಾಯ 1 ರ ಫಸ್ಟ್ ಲುಕ್ ಇಂದು ಬಿಡುಗಡೆಯಾಗಲಿದೆ.

ಈ ಕ್ಷಣಕ್ಕಾಗಿ ಅಭಿಮಾನಿಗಳು ಬಹಳ ದಿನಗಳಿಂದ ಕಾಯುತ್ತಿದ್ದಾರೆ. ಕಾಂತಾರ 2 ನಿಜವಾಗಿ ಕಾಂತಾರದ ಪೂರ್ವ ಕತೆಯಾಗಿರುವುದರಿಂದ ಕಾಂತಾರ ಅಧ್ಯಾಯ 1 ಎಂದೇ ಕರೆಯಲಾಗುತ್ತಿದೆ.

ಹೊಂಬಾಳೆ ಫಿಲಂಸ್ ಮೊನ್ನೆಯೇ ಫಸ್ಟ್ ಲುಕ್ ಬಿಡುಗಡೆ ದಿನಾಂಕದ ಬಗ್ಗೆ ಘೋಷಣೆ ಮಾಡಿತ್ತು. ಅದರಂತೆ ಇಂದು ಮಧ್ಯಾಹ್ನ 12.25 ಕ್ಕೆ ಕಾಂತಾರ ಅಧ‍್ಯಾಯ 1 ರ ಫಸ್ಟ್ ಲುಕ್ ಬಿಡುಗಡೆಯಾಗಲಿದೆ.

ಇಂದೇ ಸರಳವಾಗಿ ಉಡುಪಿಯಲ್ಲಿ ಕಾಂತಾರ 2 ನೇ ಭಾಗದ ಮುಹೂರ್ತ ಕಾರ್ಯಕ್ರಮವೂ ನಡೆಯಲಿದೆ. ಇಲ್ಲಿಯೇ ಸುತ್ತಮುತ್ತಲ ಲೊಕೇಷನ್ ನಲ್ಲಿ ಚಿತ್ರೀಕರಣ ನಡೆಯಲಿದೆ. ಡಿಸೆಂಬರ್ ನಿಂದ ಚಿತ್ರೀಕರಣ ಆರಂಭವಾಗಲಿದೆ. ಈ ಬಾರಿ ಹೊಂಬಾಳೆ ಫಿಲಂಸ್ ಅದ್ಧೂರಿಯಾಗಿ ಸಿನಿಮಾ ನಿರ್ಮಿಸಲು ತಯಾರಿ ಮಾಡಿಕೊಂಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರು ಕಂಬಳದಲ್ಲಿ ಕಾಂತಾರ ಕೋಣಗಳಿಗೆ ಚಿನ್ನ