Select Your Language

Notifications

webdunia
webdunia
webdunia
webdunia

ಬೆಂಗಳೂರು ಕಂಬಳದಲ್ಲಿ ಕಾಂತಾರ ಕೋಣಗಳಿಗೆ ಚಿನ್ನ

ಬೆಂಗಳೂರು ಕಂಬಳದಲ್ಲಿ ಕಾಂತಾರ ಕೋಣಗಳಿಗೆ ಚಿನ್ನ
ಬೆಂಗಳೂರು , ಭಾನುವಾರ, 26 ನವೆಂಬರ್ 2023 (21:25 IST)
File photo
ಬೆಂಗಳೂರು: ಬೆಂಗಳೂರು ಕಂಬಳ ಉತ್ಸವದಲ್ಲಿ ಪಾಲ್ಗೊಂಡಿದ್ದ ಕಾಂತಾರ ಸಿನಿಮಾ ಖ್ಯಾತಿಯ ಜೋಡಿ ಕೋಣಗಳು ಚಿನ್ನ ಗೆದ್ದು ಬೀಗಿವೆ.

ರಿಷಬ್ ಶೆಟ್ಟಿ ನಟಿಸಿರುವ ಕಾಂತಾರ ಸಿನಿಮಾದಲ್ಲಿ ಕಂಬಳದ ದೃಶ್ಯವಿದೆ. ರಿಷಬ್ ಶೆಟ್ಟಿ ಕಂಬಳದ ಕೋಣಗಳನ್ನು ಓಡಿಸುವ ದೃಶ್ಯದ ಮೂಲಕ ಎಂಟ್ರಿ ಕೊಡುತ್ತಾರೆ.

ಈ ದೃಶ್ಯದಲ್ಲಿ ಭಾಗಿಯಾದ ಕೋಣಗಳಾದ ಅಪ್ಪು-ಕಿಟ್ಟು ಜೋಡಿ ಕನೆಹಲಗೆ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.  ಉಡುಪಿಯ ಬೈಂದೂರು ಪರಮೇಶ್ವರ ಭಟ್ ಅವರು ಈ ಕೋಣದ ಮಾಲಿಕರು.

ಕಾಂತಾರ ಸಿನಿಮಾದಲ್ಲಿ ಮಹೇಶ್ ರಿಷಬ್ ಶೆಟ್ಟಿಗೆ ಕೋಣಗಳನ್ನು ಓಡಿಸಲು ಟ್ರೈನಿಂಗ್ ಕೊಟ್ಟಿದ್ದರು. ಈ ಬಾರಿ ಬೆಂಗಳೂರ ಕಂಬಳದಲ್ಲಿ ಈ ಕೋಣಗಳನ್ನು ರಾಘವೇಂದ್ರ ಪೂಜಾರಿ ಓಡಿಸಿದರು.  ಇನ್ನು ಈ ಕೋಣಗಳ ಜೊತೆ ಜನರು ಸೆಲ್ಫೀ ತೆಗೆಸಿಕೊಳ್ಳುತ್ತಿದ್ದ ದೃಶ್ಯವೂ ಸಾಮಾನ್ಯವಾಗಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರು ಕಂಬಳದಲ್ಲಿ ರಕ್ಷಿತ್ ಶೆಟ್ಟಿ ಹುಲಿ ಡ್ಯಾನ್ಸ್