Select Your Language

Notifications

webdunia
webdunia
webdunia
webdunia

ರಾಜಮೌಳಿ ಕಾಲಿಗೆ ನಮಸ್ಕರಿಸಿದ ರಣಬೀರ್ ಕಪೂರ್: ಶುರುವಾಯ್ತು ಪರ-ವಿರೋಧ ಚರ್ಚೆ

ರಾಜಮೌಳಿ ಕಾಲಿಗೆ ನಮಸ್ಕರಿಸಿದ ರಣಬೀರ್ ಕಪೂರ್: ಶುರುವಾಯ್ತು ಪರ-ವಿರೋಧ ಚರ್ಚೆ
ಹೈದರಾಬಾದ್ , ಮಂಗಳವಾರ, 28 ನವೆಂಬರ್ 2023 (10:50 IST)
Photo Courtesy: Twitter
ಹೈದರಾಬಾದ್: ಅನಿಮಲ್ ಸಿನಿಮಾ ಪ್ರಚಾರಕ್ಕೆ ಹೈದರಾಬಾದ್ ಗೆ ತೆರಳಿದ್ದ ರಣಬೀರ್ ಕಪೂರ್ ಕಾರ್ಯಕ್ರಮದಲ್ಲಿ ನಿರ್ದೇಶಕ ರಾಜಮೌಳಿ ಕಾಲಿಗೆ ನಮಸ್ಕರಿಸಿದ್ದರು. ಅದರ ಬಗ್ಗೆ ಈಗ ನೆಟ್ಟಿಗರು ಪರ-ವಿರೋಧ ಚರ್ಚೆ ಶುರು ಮಾಡಿದ್ದಾರೆ.

ಅನಿಮಲ್ ಸಿನಿಮಾ ಪ್ರಚಾರಕ್ಕಾಗಿ ಹೈದರಾಬಾದ್ ನಲ್ಲಿ ದೊಡ್ಡ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ ಸೇರಿದಂತೆ ಇಡೀ ಚಿತ್ರತಂಡ ಹಾಜರಿತ್ತು. ಜೊತೆಗೆ ಟಾಲಿವುಡ್ ನಟ ಮಹೇಶ್ ಬಾಬು, ನಿರ್ದೇಶಕ ರಾಜಮೌಳಿ ಆಗಮಿಸಿದ್ದರು.

ರಾಜಮೌಳಿ ವೇದಿಕೆಯತ್ತ ಬರುವಾಗ ರಣಬೀರ್ ಹತ್ತಿರ ಹೋಗಿ ಅವರ ಕಾಲಿಗೆ ಬಿದ್ದು ನಮಸ್ಕರಿಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆರಂಭದಲ್ಲಿ ಈ ವಿಡಿಯೋಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಆದರೆ ಬಳಿಕ ಕೆಲವರು ಈ ರೀತಿ ರಣಬೀರ್ ಕಾಲಿಗೆ ಬೀಳುವ ಅವಶ್ಯತೆಯಿತ್ತಾ? ರಣವೀರ್ ಸಿಂಗ್ ಈ ರೀತಿ ಮಾಡಿದ್ದರೆ ಎಲ್ಲಾ ಗಿಮಿಕ್ ಎನ್ನುತ್ತಿದ್ದರು ಎಂದು ಟಾಂಗ್ ಕೊಟ್ಟಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ತೆಲುಗು ಜನ ದೇಶವನ್ನೇ ಆಳಲಿದ್ದಾರೆ: ಸಚಿವ ಮಲ್ಲ ರೆಡ್ಡಿ ವಿವಾದಿತ ಹೇಳಿಕೆಗೆ ರಣಬೀರ್ ಪ್ರತಿಕ್ರಿಯೆ ಹೇಗಿತ್ತು?