Select Your Language

Notifications

webdunia
webdunia
webdunia
webdunia

ಅನಿಮಲ್ ಸಿನಿಮಾಗೆ ಎರಡು ಇಂಟರ್ ವೆಲ್: ವಿಶಿಷ್ಟ ಪ್ರಯೋಗಕ್ಕೆ ಮುಂದಾದ ಚಿತ್ರತಂಡ

ಅನಿಮಲ್ ಸಿನಿಮಾಗೆ ಎರಡು ಇಂಟರ್ ವೆಲ್: ವಿಶಿಷ್ಟ ಪ್ರಯೋಗಕ್ಕೆ ಮುಂದಾದ ಚಿತ್ರತಂಡ
ಮುಂಬೈ , ಬುಧವಾರ, 1 ನವೆಂಬರ್ 2023 (11:33 IST)
ಮುಂಬೈ: ರಣಬೀರ್ ಕಪೂರ್-ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ನಟಿಸಿರುವ ಅನಿಮಲ್ ಸಿನಿಮಾ ಡಿಸೆಂಬರ್ 1 ರಂದು ತೆರೆಗೆ ಬರಲಿದೆ.

ಆದರೆ ಈ ಸಿನಿಮಾ ಅವಧಿ ನೋಡಿದ ಪ್ರೇಕ್ಷಕರಿಗೆ ಶಾಕ್ ಕಾದಿದೆ. ಸಿನಿಮಾ ಒಟ್ಟಾರೆ 3 ಗಂಟೆ 18 ನಿಮಿಷ ಅವಧಿ ಇರಲಿದೆ. ಇತ್ತೀಚೆಗಿನ ವರ್ಷಗಳಲ್ಲಿ ಇಷ್ಟು ಸುದೀರ್ಘ ಸಮಯದ ಸಿನಿಮಾ ಬಂದ ಉದಾಹರಣೆಯೇ ಇಲ್ಲ. ಒಂದು ಕತೆ ವಿಸ್ತೃತವಾಗಿದ್ದರೆ ಎರಡು ಭಾಗಗಳಲ್ಲಿ ರಿಲೀಸ್ ಮಾಡಲಾಗುತ್ತದೆ.

ಆದರೆ ಅನಿಮಲ್ ಸಿನಿಮಾ ತಂಡ ಒಂದೇ ಭಾಗದಲ್ಲಿ ಆದರೆ ಎರಡು ಇಂಟರ್ ವೆಲ್ ನೀಡಿ ಸಿನಿಮಾ ರಿಲೀಸ್ ಮಾಡಲು ಯೋಜನೆ ಹಾಕಿಕೊಂಡಿದೆ. ಹೀಗಾಗಿ ಅನಿಮಲ್ ಸಿನಿಮಾದಲ್ಲಿ ಎರಡು ಇಂಟರ್ ವೆಲ್ ಇರಲಿದೆ. ಇದು ಇತ್ತೀಚೆಗಿನ ವರ್ಷಗಳಲ್ಲಿ ವಿಶಿಷ್ಟ ಪ್ರಯೋಗವೆನ್ನಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಗೆ ನಾಯಿ ಕಡಿತ: ನಟ ದರ್ಶನ್ ವಿರುದ್ಧ ದೂರು ದಾಖಲು