Select Your Language

Notifications

webdunia
webdunia
webdunia
webdunia

ಮಹಿಳೆಗೆ ನಾಯಿ ಕಡಿತ: ನಟ ದರ್ಶನ್ ವಿರುದ್ಧ ದೂರು ದಾಖಲು

ಮಹಿಳೆಗೆ ನಾಯಿ ಕಡಿತ: ನಟ ದರ್ಶನ್ ವಿರುದ್ಧ ದೂರು ದಾಖಲು
ಬೆಂಗಳೂರು , ಬುಧವಾರ, 1 ನವೆಂಬರ್ 2023 (06:20 IST)
ಬೆಂಗಳೂರು: ಇತ್ತೀಚೆಗಷ್ಟೇ ಹುಲಿ ಉಗುರಿನ ಆಭರಣ ಹೊಂದಿದ್ದ ಪ್ರಕರಣದಲ್ಲಿ ಅರಣ್ಯಾಧಿಕಾರಿಗಳಿಂದ ನೋಟಿಸ್ ಪಡೆದಿದ್ದ ದರ್ಶನ್ ಮೇಲೆ ಇದೀಗ ಮಹಿಳೆಯೊಬ್ಬರು ನಾಯಿ ಕಡಿದಿದ್ದಕ್ಕೆ ದೂರು ನೀಡಿದ್ದಾರೆ.

ದರ್ಶನ್ ರ ಆರ್ ಆರ್ ನಗರದ ನಿವಾಸದ ಬಳಿ ಖಾಲಿ ಜಾಗದಲ್ಲಿ ಕಾರು ಪಾರ್ಕ್ ಮಾಡಿ ಮಹಿಳೆ ಕಾರ್ಯಕ್ರಮವೊಂದಕ್ಕೆ ತೆರಳಿದ್ದರು. ವಾಪಸಾಗುವಾಗ ಕಾರಿನ ಬಳಿ ಮೂರು ನಾಯಿಗಳಿದ್ದವು. ಅವುಗಳನ್ನು ಕರೆಸಿಕೊಳ್ಳುವಂತೆ ಮಹಿಳೆ ದರ್ಶನ್ ಮನೆಯ ಸಿಬ್ಬಂದಿಗೆ ಹೇಳಿದ್ದಾರೆ. ಈ ವೇಳೆ ಸಿಬ್ಬಂದಿ ಮತ್ತು ಮಹಿಳೆಯ ನಡುವೆ ಘರ್ಷಣೆಯಾಗಿದೆ. ಇದೇ ಸಂದರ್ಭದಲ್ಲಿ ನಾಯಿ ಮಹಿಳೆಗೆ ಕಚ್ಚಿ ಗಾಯ ಮಾಡಿವೆ.

ಈ ಕಾರಣಕ್ಕೆ ಮಹಿಳೆ ಆರ್ ಆರ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ನಟ ದರ್ಶನ್ ರನ್ನು ಎರಡನೇ ಆರೋಪಿಯಾಗಿ ಮಾಡಿ ಮಹಿಳೆ ದೂರು ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಿರಿಯ ನಟ ಬ್ಯಾಂಕ್ ಜನಾರ್ಧನ್, ಡಿಂಗ್ರಿ ನಾಗರಾಜ್ ಗೆ ರಾಜ್ಯೋತ್ಸವ ಪ್ರಶಸ್ತಿ