Select Your Language

Notifications

webdunia
webdunia
webdunia
webdunia

ಹುಲಿ ಉಗುರು ಪ್ರಕರಣದಲ್ಲಿ ಜಗ್ಗೇಶ್ ಗೆ ರಿಲೀಫ್ ನೀಡಿದ ಹೈಕೋರ್ಟ್

ಹುಲಿ ಉಗುರು ಪ್ರಕರಣದಲ್ಲಿ ಜಗ್ಗೇಶ್ ಗೆ ರಿಲೀಫ್ ನೀಡಿದ ಹೈಕೋರ್ಟ್
ಬೆಂಗಳೂರು , ಸೋಮವಾರ, 30 ಅಕ್ಟೋಬರ್ 2023 (16:22 IST)
ಬೆಂಗಳೂರು: ಹುಲಿ ಉಗುರಿನ ಆಭರಣ ಹೊಂದಿದ ಪ್ರಕರಣದಲ್ಲಿ ನಟ, ಸಂಸದ ಜಗ್ಗೇಶ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ರಿಲೀಫ್ ನೀಡಿದೆ.

ಅರಣ್ಯಾಧಿಕಾರಿಗಳು ನೋಟಿಸ್ ನೀಡಿದ ಬೆನ್ನಲ್ಲೇ ಸಮಯಾವಕಾಶವನ್ನೂ ನೀಡದೇ ಮನೆ ಮೇಲೆ ದಾಳಿ ನಡೆಸಿ ವಸ್ತುಗಳನ್ನು ಚಲ್ಲಾಪಿಲ್ಲಿ ಮಾಡಿದ್ದಾರೆ. ಅವರು ಕೇಳಿದ ವಸ್ತುಗಳನ್ನು ಅವರಿಗೆ ಒಪ್ಪಿಸಲಾಗಿದೆ. ಅರಣ್ಯಾಧಿಕಾರಿಗಳ ನೋಟಿಸ್ ಗೆ ತಡೆ ನೀಡಬೇಕು ಎಂದು ಜಗ್ಗೇಶ್ ಹೈಕೋರ್ಟ್ ಗೆ ಮನವಿ ಸಲ್ಲಿಸಿದ್ದರು.

ಅವರ ಮನವಿ ಪುರಸ್ಕರಿಸಿದ ಹೈಕೋರ್ಟ್ ನೋಟಿಸ್ ಗೆ ತಡೆ ನೀಡಿದೆ. ಜಗ್ಗೇಶ್ ಪರ ಹಿರಿಯ ವಕೀಲ ಪ್ರಭುಲಿಂಗ್ ನಾವದಗಿ ವಾದ ಮಂಡಿಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ತಲೈವಾ ರಜನೀಕಾಂತ್ ಗೆ ವಿಲನ್ ಆಗಲಿದ್ದಾರೆ ದುನಿಯಾ ವಿಜಯ್