Select Your Language

Notifications

webdunia
webdunia
webdunia
webdunia

ಕಾಂತಾರ 2 ಅಲ್ಲ, ಕಾಂತಾರ 1 ಶೂಟಿಂಗ್ ಶುರು!

ರಿಷಬ್ ಶೆಟ್ಟಿ
ಬೆಂಗಳೂರು: ರಿಷಬ್ ಶೆಟ್ಟಿಗೆ ಸಾಕಷ್ಟು ಖ್ಯಾತಿ ಗಳಿಸಿಕೊಟ್ಟ ಸಿನಿಮಾ ಕಾಂತಾರ. ಇದರ ಮುಂದಿನ ಭಾಗ ಕೂಡಾ ಸೆಟ್ಟೇರುತ್ತಿದೆ. ಆದರೆ ಶೂಟಿಂಗ್ ಯಾವಾಗ ಎಂದು ಇದುವರೆಗೆ ರಿಷಬ್ ಗುಟ್ಟುಬಿಟ್ಟುಕೊಟ್ಟಿರಲಿಲ್ಲ.

ಕಾಂತಾರ ಸಿನಿಮಾ ಬಂದು ಒಂದು ವರ್ಷ ಕಳೆದಿದ್ದು ಇಷ್ಟು ದಿನಗಳಲ್ಲಿ ರಿಷಬ್ ಮುಂದಿನ ಭಾಗಕ್ಕೆ ತಯಾರಿ ಮಾಡಿಕೊಂಡಿದ್ದರು. ಸ್ಕ್ರಿಪ್ಟ್ ಜೊತೆಗೆ ಕೆಲವು ಸಾಹಸ ಕ್ರೀಡೆಗಳನ್ನು ಕಲಿಯುವ ಕೆಲಸ ಮಾಡುತ್ತಿದ್ದರು. ಅಲ್ಲದೆ, ಶೂಟಿಂಗ್ ಮಾಡುವ ಲೊಕೇಷನ್ ಗಳನ್ನು ಗುರುತಿಸಿಕೊಂಡಿದ್ದಾರೆ.

ಇದೀಗ ಉಡುಪಿಯಲ್ಲಿ ನಡೆದ ವಿಶ್ವ ಬಂಟರ ಸಮ್ಮೇಳನದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ರಿಷಬ್, ನವಂಬರ್ ಅಥವಾ ಡಿಸೆಂಬರ್ ನಿಂದ ಶೂಟಿಂಗ್ ಆರಂಭಿಸುವುದಾಗಿ ಘೋಷಿಸಿದ್ದಾರೆ. ಹೀಗಾಗಿ ಮುಂದಿನ ಒಂದು ವರ್ಷ ನನ್ನನ್ನು ಯಾವುದೇ ಕಾರ್ಯಕ್ರಮಕ್ಕೆ ಕರೆಯಬೇಡಿ. ಶೂಟಿಂಗ್ ನಲ್ಲಿರುವಾಗ ಕಾರ್ಯಕ್ರಮಗಳಿಗೆ ಬರಲು ಆಗುವುದಿಲ್ಲ. ಇದಕ್ಕೆ ಬೇಸರ ಬೇಡ ಎಂದು ಮನವಿ ಮಾಡಿದ್ದಾರೆ.

ಈಗ ಸೆಟ್ಟೇರುತ್ತಿರುವುದು ಕಾಂತಾರ 1. ಕಾಂತಾರ 2 ವನ್ನು ಈಗಾಗಲೇ ನೀವು ನೋಡಿದ್ದೀರಿ. ಇನ್ನೀಗ ಬರಲಿರುವುದು ಕಾಂತಾರ 1 ಎಂದು ರಿಷಬ್ ಮತ್ತೊಮ್ಮೆ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಮದುವೆ ದಿನ ಬಹಿರಂಗ