ಮುಂಬೈ: ರಣಬೀರ್ ಕಪೂರ್ ನಾಯಕರಾಗಿರುವ ಅನಿಮಲ್ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.
ಈ ಸಿನಿಮಾದ ರಶ್ಮಿಕಾ ಅವರ ಪೋಸ್ಟರ್ ಒಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಈ ಪೋಸ್ಟರ್ ನಲ್ಲಿ ರಶ್ಮಿಕಾ ಅಪ್ಪಟ ಗೃಹಿಣಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಸೀರೆಯುಟ್ಟು, ತಾಳಿ ಸರ ಧರಿಸಿರುವ ಅಪ್ಪಟ ಭಾರತೀಯ ನಾರಿಯಂತೆ ರಶ್ಮಿಕಾ ಕಾಣಿಸಿಕೊಂಡಿದ್ದಾರೆ. ಇಷ್ಟು ದಿನ ಅವರ ಗ್ಲಾಮರಸ್ ಫೋಟೋಗಳನ್ನೇ ನೋಡುತ್ತಿದ್ದ ಫ್ಯಾನ್ಸ್ ಗೆ ಈ ಗೃಹಿಣಿ ಅವತಾರದ ಫೋಟೋ ಭಾರೀ ಇಷ್ಟವಾಗಿದೆ.