Publish Date: Sun, 08 Oct 2023 (09:25 IST)
Updated Date: Sun, 08 Oct 2023 (09:28 IST)
ಹೈದರಾಬಾದ್: ಟಾಲಿವುಡ್ ಸ್ಟಾರ್ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹಲವು ಸಮಯದಿಂದ ಕೇಳಿಬರುತ್ತಲೇ ಇದೆ. ಇದೀಗ ಫೋಟೋವೊಂದರ ಮೂಲಕ ವಿಜಯ್, ರಶ್ಮಿಕಾ ನೆಟ್ಟಿಗರ ಗಮನ ಸೆಳೆದಿದ್ದಾರೆ.
ಕೆಲವು ದಿನಗಳ ಮೊದಲು ರಶ್ಮಿಕಾ ಸೀರೆಯುಟ್ಟ ಫೋಟೋವೊಂದನ್ನು ಪ್ರಕಟಿಸಿದ್ದರು. ಆದರೆ ಆ ಫೋಟೋ ತೆಗೆದಿದ್ದು ವಿಜಯ್ ಮನೆಯಲ್ಲಿ ಎಂದು ನೆಟ್ಟಿಗರು ಗಮನಿಸಿದ್ದರು.
ಇದೀಗ ರಶ್ಮಿಕಾ ಮತ್ತೆ ಟರ್ಕಿ ದೇಶದ ಕೆಫೆಯೊಂದರಲ್ಲಿರುವ ಫೋಟೋವೊಂದನ್ನು ಪ್ರಕಟಿಸಿದ್ದಾರೆ. ವಿಜಯ್ ಕೂಡಾ ಇದೇ ಕೆಫೆಯಲ್ಲಿರುವ ಫೋಟೋ ಪ್ರಕಟಿಸಿದ್ದಾರೆ. ಇಬ್ಬರೂ ಬೇರೆ ಬೇರೆ ಫೋಟೋ ಪ್ರಕಟಿಸಿದರೂ ಇದರಲ್ಲಿರುವ ಸಾಮ್ಯತೆ ನೆಟ್ಟಿಗರ ಸೂಕ್ಷ್ಮ ಕಣ್ಣಿಗೆ ಬಿದ್ದಿದೆ. ಹೀಗಾಗಿ ಇಬ್ಬರೂ ಜೊತೆಯಾಗಿಯೇ ಪ್ರವಾಸ ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಅಂದಾಜಿಸಿದ್ದಾರೆ.