Publish Date: Wed, 04 Oct 2023 (17:11 IST)
Updated Date: Wed, 04 Oct 2023 (17:14 IST)
ಮುಂಬೈ: ಟಾಲಿವುಡ್ ಸ್ಟಾರ್ ನಟ ರಾಮ್ ಚರಣ್ ತೇಜ ಅಯ್ಯಪ್ಪ ಮಾಲಧಾರಿಯಾಗಿ ಮುಂಬೈನ ಸಿದ್ಧಿವಿನಾಯಕ ದೇವರ ದರ್ಶನ ಪಡೆದಿದ್ದಾರೆ.
ವಿಶೇಷವೆಂದರೆ ರಾಮ್ ಚರಣ್ ಬರಿಗಾಲಲ್ಲಿ ನಡೆದು ಬಂದಿದ್ದರು. ಈ ಮೊದಲು ಆಸ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಕೆಲವು ದಿನಗಳ ಮೊದಲು ರಾಮ್ ಚರಣ್ ಅಯ್ಯಪ್ಪ ವ್ರತ ಮಾಡಿದ್ದರು. ಆಗಲೂ ಬರಿಗಾಲಲ್ಲೇ ಅಮೆರಿಕಾಗೆ ಪ್ರಯಾಣ ಬೆಳೆಸಿದ್ದರು.
ರಾಮ್ ಚರಣ್ ಮತ್ತು ಪತ್ನಿ ಉಪಾಸನಾ ಅಪಾರ ದೈವ ಭಕ್ತರು. ಎಲ್ಲೇ ಹೋದರೂ ತಮ್ಮ ಮೆಚ್ಚಿನ ದೇವರ ಮೂರ್ತಿಯನ್ನು ಜೊತೆಗೇ ಕರೆದೊಯ್ಯುತ್ತಾರಂತೆ. ಈಗ ದೇವರ ದರ್ಶನ ಪಡೆವಾಗಲೂ ಅದೇ ಭಕ್ತಿ ಭಾವದಿಂದ ಪೂಜೆ ಮಾಡಿದ್ದಾರೆ.