Select Your Language

Notifications

webdunia
webdunia
webdunia
webdunia

ಮತ್ತೇ ಚಿತ್ರರಂಗಕ್ಕೆ ವಾಪಾಸ್ಸಾದ ಗೋಲ್ಡನ್ ಕ್ವೀನ್ ಅಮೂಲ್ಯ, ಬರ್ತಡೇ ದಿನ ಅಭಿಮಾನಿಗಳಿಗೆ ಡಬಲ್ ಧಮಾಕ

ನಟಿ ಅಮೂಲ್ಯ

Sampriya

ಬೆಂಗಳೂರು , ಭಾನುವಾರ, 14 ಸೆಪ್ಟಂಬರ್ 2025 (13:37 IST)
Photo Credit X
ಬೆಂಗಳೂರು: ನಟಿ ಅಮೂಲ್ಯ ಅವರು ತಮ್ಮ ಬರ್ತಡೇ ದಿನ ಅಭಿಮಾನಿಗಳಿಗೆ ಗುಡ್‌ನ್ಯೂಸ್‌ ನೀಡಿದ್ದಾರೆ. ಇವತ್ತು 32ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಗೋಲ್ಡನ್ ಕ್ವೀನ್ ಅವರು ಪೀಕಬೂ ಸಿನಿಮಾದ ಮೂಲಕ ಮತ್ತೇ ಚಿತ್ರರಂಗಕ್ಕೆ ವಾಪಾಸ್ಸಾಗಿದ್ದಾರೆ. 

ಈ ಸುದ್ದಿ ತಿಳಿದು ಅಮ್ಮು ಅಭಿಮಾನಿಗಳು ಫುಲ್ ಖುಷಿಯಾಗಿ, ಶುಭ ಹಾರೈಸುತ್ತಿದ್ದಾರೆ. 

ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿರುವಾಗಲೇ ಅಮೂಲ್ಯ ಅವರು ಜಗದೀಶ್ ಅವರನ್ನು ಕೈಹಿಡಿದರು. ಮದುವೆ ಬಳಿಕ ಸಿನಿಮಾ ರಂಗದಿಂದ ಬ್ರೇಕ್ ಪಡೆದಿದ್ದರು. 2022ರಲ್ಲಿ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದ ಅಮೂಲ್ಯ ಅವರು ಮಕ್ಕಳ
ಆರೈಕೆಯಲ್ಲೇ ಫುಲ್ ಬಿಸಿಯಾಗಿದ್ದರು. 

ಈಚೆಗೆ ಜೀ ಕನ್ನಡದಲ್ಲಿ ಶುರುವಾದ ನಾವು ನಮ್ಮವರು ರಿಯಾಲಿಟಿ ಶೋನಲ್ಲಿ ಜಡ್ಜ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಟಿ ಕಿರುತೆರೆಯ ರಿಯಾಲಿಟಿ ಶೋ ಜಡ್ಜ್‌ ಆಗಿ ನೋಡಿ ಅವರ ಅಭಿಮಾನಿಗಳು ಖುಷಿಯಾಗಿದ್ದರು. 

ಇದೀಗ ನಟಿ ಮತ್ತೇ ದೊಡ್ಡ ಪರದೆ ಮೇಲೆ ಬರುವ ಸುದ್ದಿ ಕೇಳಿ ಸಂಭ್ರಮಿಸಿದ್ದಾರೆ. ಬರ್ತಡೇ ದಿನದಂದು ಪೀಕಿಬೂ ಸಿನಿಮಾದ ಮೊದಲ ಟೀಸರ್‌ ಅನ್ನು ಬಿಡುಗಡೆ ಮಾಡಲಾಗಿದೆ. ದರಲ್ಲಿ ನಟಿ ಮುದ್ದಾಗಿ ಹೆಜ್ಜೆ ಹಾಕುತ್ತಿರುವುದನ್ನು ಕಾಣಬಹುದು.  ಇಂದು ಅವರಸಾಮಾಜಿಕ ಜಾಲತಾಣದಲ್ಲಿ ಮುದ್ದಿನ ಮಕ್ಕಳ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು. 

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್‌ಬಾಸ್‌ ಮನೆಗೆ ಕಾಲಿಡುತ್ತಾರಾ ಅನುಶ್ರೀ ಗಂಡ ರೋಷನ್‌, ಹೀಗೊಂದು ಪೋಸ್ಟ್ ವೈರಲ್