ಬೆಂಗಳೂರು: ಬಿಗ್ ಬಾಸ್, ಕಮಲಿ ಧಾರವಾಹಿ ಖ್ಯಾತಿಯ ನಟಿ ಅಮೂಲ್ಯ ಮತ್ತು ನಟ ನಿರಂಜನ್ ನಡುವೆ ಏನೋ ಇದೆ ಎಂಬ ಸುದ್ದಿ ಬಹಳ ದಿನಗಳಿಂದ ಹರಿದಾಡುತ್ತಿದೆ. ಇಂದು ಅಮೂಲ್ಯ ಬರ್ತ್ ಡೇ ಆಗಿದ್ದು ಈ ದಿನವೇ ಇಬ್ಬರ ನಡುವೆ ಪ್ರೀತಿ ಇರುವುದು ಬಹುತೇಕ ಕನ್ ಫರ್ಮ್ ಆಗಿದೆ.
ಅಮೂಲ್ಯ ಮತ್ತು ನಿರಂಜನ್ ಕಮಲಿ ಧಾರವಾಹಿಯಲ್ಲಿ ಕಮಲಿ ಮತ್ತು ರಿಷಿ ಪಾತ್ರ ಮಾಡುತ್ತಿದ್ದರು. ಸೀರಿಯಲ್ ನಲ್ಲಿ ಹೀರೋ-ಹೀರೋಯಿನ್ ಆಗಿದ್ದ ಜೋಡಿ ನಿಜ ಜೀವನದಲ್ಲೂ ಒಂದಾಗುವ ಲಕ್ಷಣವಿದೆ. ಇತ್ತೀಚೆಗೆ ತೆಲುಗು ಶೋ ಒಂದರಲ್ಲಿ ಇಬ್ಬರ ಪ್ರೀತಿ ವಿಚಾರ ಬಹಿರಂಗವಾಗಿತ್ತು. ಲೈವ್ ನಲ್ಲೇ ನಿರಂಜನ್ ಗೆ ಕಾಲ್ ಮಾಡಿದ್ದ ಅಮೂಲ್ಯ ನಾನು ಶೋನಲ್ಲಿದ್ದೀನಿ ಎಂದು ಅವರು ಇನ್ನೇನೋ ಹೇಳುವುದನ್ನು ತಡೆದಿದ್ದರು. ಇನ್ನು ಆಂಕರ್ ಕೂಡಾ ನೀವು ಇಷ್ಟು ದೊಡ್ಡ ವಿಷಯ ಮುಚ್ಚಿಡುತ್ತೀರಿ ಎಂದು ಅಂದುಕೊಂಡಿರಲಿಲ್ಲ ಎಂದಾಗ ಅಮೂಲ್ಯ ನಾಚಿ ನೀರಾಗಿದ್ದರು.
ಇದೀಗ ಅಮೂಲ್ಯ ನಿನ್ನೆ ರಾತ್ರಿ ತಮ್ಮ ಆಪ್ತರೊಂದಿಗೆ ಹುಟ್ಟುಹಬ್ಬ ಆಚರಿಸಿದ್ದಾರೆ. ಈ ಪಾರ್ಟಿಯಲ್ಲಿ ನಿರಂಜನ್ ಕೂಡಾ ಅಮೂಲ್ಯ ಜೊತೆಗೇ ಇದ್ದರು. ಮೊನ್ನೆ ಹೊಸ ವರ್ಷವನ್ನೂ ಇಬ್ಬರೂ ಜೊತೆಗೇ ಆಚರಿಸಿಕೊಂಡಿದ್ದರು. ಅಷ್ಟೇ ಅಲ್ಲದೆ, ಸೋಷಿಯಲ್ ಮೀಡಿಯಾದಲ್ಲೂ ನಿರಂಜನ್ ಹುಟ್ಟುಹಬ್ಬದ ಶುಭಾಶಯ ಕೋರಿದ್ದು ಜಗವೇ ನೀನು ಗೆಳತಿಯೇ ಹಾಡನ್ನು ಹಾಕಿ ಹ್ಯಾಪೀ ಬರ್ತ್ ಡೇ ಮುದ್ದು ಎಂದು ಕ್ಯೂಟ್ ಆಗಿ ತಮ್ಮ ಪ್ರೀತಿ ಹಂಚಿಕೊಂಡಿದ್ದಾರೆ. ಹೀಗಾಗಿ ಇಬ್ಬರೂ ರಿಲೇಷನ್ ಶಿಪ್ ನಲ್ಲಿರುವುದು ಕನ್ ಫರ್ಮ್ ಎನ್ನಲಾಗಿದೆ.