ಬೆಂಗಳೂರು: ಕನ್ನಡ ಧಾರವಾಹಿ ಲೋಕದಲ್ಲಿ ಸದ್ದು ಮಾಡುತ್ತಿರುವ ಎರಡು ಧಾರವಾಹಿಗಳು ಸದ್ಯದಲ್ಲೇ ಮುಕ್ತಾಯ ಕಾಣುವ ಸೂಚನೆ ಕಾಣುತ್ತಿದೆ. ಆ ಎರಡು ಧಾರವಾಹಿಗಳು ಯಾವುದು ನೋಡಿ.
ಅಮೃತಧಾರೆ
ಕನ್ನಡದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ್ದ ಧಾರವಾಹಿ ಅಮೃತಧಾರೆ. ಈ ಧಾರವಾಹಿಯ ಸದ್ಯದ ಕತೆ ನೋಡುತ್ತಿದ್ದರೆ ಸದ್ಯದಲ್ಲೇ ಈ ಧಾರವಾಹಿ ಎಂಡ್ ಆಗುವುದು ಖಚಿತ ಎನ್ನಲಾಗಿದೆ. ಅಮೃತಧಾರೆ ಸೀರಿಯಲ್ ಈಗ ಒಂದು ಹಂತಕ್ಕೆ ಬಂದು ನಿಂತಿದೆ. ನಾಯಕ ಗೌತಮ್ ಧಿವಾನ್ ತಾಯಿ, ತಂಗಿ ಸಿಕ್ಕಾಗಿದೆ. ಇನ್ನೀಗ ವಿಲನ್ ಶಕುಂತಲಾ ಮುಖವಾಡ ಕಳಚಬೇಕಿದೆ. ಅದೂ ಸದ್ಯದಲ್ಲೇ ಆಗಲಿದೆ ಎನ್ನಲಾಗಿದೆ. ಜೀ ಕನ್ನಡದಲ್ಲಿ ಹೊಸ ಧಾರವಾಹಿಗಳು ಬರುತ್ತಿದ್ದು ಅದಕ್ಕೆ ಅಮೃತಧಾರೆ ದಾರಿ ಮಾಡಿಕೊಡಲಿದೆ ಎನ್ನಲಾಗಿದೆ. ಈಗ ಈ ಧಾರವಾಹಿ 495 ಎಪಿಸೋಡ್ ಗಳನ್ನು ಪೂರೈಸಿದೆ.
ಶ್ರೀರಸ್ತು ಶುಭಮಸ್ತು
ಇದೇ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಶ್ರೀರಸ್ತು ಶುಭಮಸ್ತು ಧಾರವಾಹಿ ಕೂಡಾ ಕೊನೆಯ ಹಂತದಲ್ಲಿದೆ. ಹಾಗೆ ನೋಡಿದರೆ ಅಮೃತಧಾರೆ ಧಾರವಾಹಿಗಿಂತಲೂ ಶ್ರೀರಸ್ತು ಶುಭಮಸ್ತು ಬೇಗನ ಮುಗಿಯುವ ಸೂಚನೆಯಿದೆ. ಧಾರವಾಹಿಯಲ್ಲಿ ತುಳಸಿ ಮಕ್ಕಳೆಲ್ಲರೂ ಒಂದಾಗಿದ್ದಾಗಿದೆ. ವಿಲನ್ ಶಾರ್ವರಿ ಮುಖವಾಡ ಕಳಚಲು ದತ್ತ ಪ್ಲ್ಯಾನ್ ಮಾಡಿದ್ದಾಗಿದೆ. ಇತ್ತ ಇನ್ನೊಬ್ಬ ವಿಲನ್ ಆಗಿರುವ ದೀಪಿಕಾಗೂ ಸದ್ಯದಲ್ಲೇ ಬುದ್ಧಿ ಕಲಿಸುವ ಸ್ಕೀಮ್ ಇದೆ. ಹೀಗಾಗಿ ಈ ಧಾರವಾಹಿ ಎಲ್ಲಾ ರೀತಿಯಲ್ಲೂ ಸುಖಾಂತ್ಯ ಕಾಣುವ ಲಕ್ಷಣದಲ್ಲಿದೆ. ಈ ಧಾರವಾಹಿ ಈಗಾಗಲೇ ಎಪಿಸೋಡ್ ಪೂರೈಸಿದೆ.