ಬೆಂಗಳೂರು: ಬರೋಬ್ಬರಿ ಆರು ತಿಂಗಳ ಬಳಿಕ ಇಂದು ರೇಣುಕಾಸ್ವಾಮಿ ಹತ್ಯೆ ಆರೋಪಿಗಳಾದ ನಟ ದರ್ಶನ್ ಮತ್ತು ಪವಿತ್ರಾ ಗೌಡ ಪರಸ್ಪರ ಮುಖಾಮುಖಿಯಾಗಲಿದ್ದಾರೆ.
									
			
			 
 			
 
 			
					
			        							
								
																	ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪವಿತ್ರಾ ಎ1 ಆರೋಪಿಯಾದರೆ ದರ್ಶನ್ ಎ2 ಆರೋಪಿ. ಇಬ್ಬರೂ ಈಗ ರೆಗ್ಯುಲರ್ ಜಾಮೀನು ಪಡೆದು ಹೊರಬಂದಿದ್ದಾರೆ. ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ನೀಡಿದ್ದ ಎಂಬ ಕಾರಣಕ್ಕೇ ದರ್ಶನ್ ತಮ್ಮ ಸಂಗಡಿಗರ ಸಹಾಯದಿಂದ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕರೆಸಿ ಹಲ್ಲೆ ಮಾಡಿ ಪರಿಣಾಮ ಸಾವನ್ನಪ್ಪಿದ್ದ ಎಂಬುದು ಆರೋಪವಾಗಿದೆ.
									
										
								
																	ಈ ಪ್ರಕರಣದ ಬಳಿಕ ದರ್ಶನ್ ಮತ್ತು ಪವಿತ್ರಾ ಗೌಡ ಕೆಲವು ದಿನ ಜೈಲು ವಾಸ ಅನುಭವಿಸಿದ್ದಾರೆ. ದರ್ಶನ್ ಬಿಡುಗಡೆಗೆ ಪತ್ನಿ ವಿಜಯಲಕ್ಷ್ಮಿ ಶ್ರಮವೇ ಕಾರಣ ಎನ್ನಬಹುದು. ಹೀಗಾಗಿ ದರ್ಶನ್ ಮುಂದೆ ಪವಿತ್ರಾರಿಂದ ದೂರವಾಗಲಿದ್ದಾರೆ ಎಂಬ ಸುದ್ದಿಗಳಿತ್ತು.
									
											
							                     
							
							
			        							
								
																	ಆದರೆ ಇಂದು ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಖುದ್ದು ಆರೋಪಿಗಳು ಕೋರ್ಟ್ ಗೆ ಹಾಜರಾಗಲಿದ್ದಾರೆ. ನ್ಯಾಯಾಧೀಶರು ಖುದ್ದಾಗಿ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಲು ಸೂಚನೆ ನೀಡಿದ್ದಾರೆ.
									
			                     
							
							
			        							
								
																	
ಹೀಗಾಗಿ ಸಿಸಿಎಚ್ 57 ರ ಕೋರ್ಟ್ ನಲ್ಲಿ ದರ್ಶನ್ ಮತ್ತು ಪವಿತ್ರಾ ಪರಸ್ಪರ ಮುಖಾಮುಖಿಯಾಗಲಿದ್ದಾರೆ. ಜಾಮೀನು ನೀಡುವ ಸಂದರ್ಭದಲ್ಲಿ ಪ್ರತೀ ತಿಂಗಳೂ ಎಲ್ಲಾ ಆರೋಪಿಗಳೂ ಕೋರ್ಟ್ ಗೆ ಹಾಜರಾಗಲು ಷರತ್ತು ವಿಧಿಸಲಾಗಿತ್ತು.