Select Your Language

Notifications

webdunia
webdunia
webdunia
webdunia

ದರ್ಶನ್ ಅಭಿಮಾನಿಗಳಿಗೆ ಭರ್ಜರಿ ನ್ಯೂಸ್: ಇಂದಿನಿಂದಲೇ ಡೆವಿಲ್ ಸಿನಿಮಾ ಕೆಲಸ ಶುರು ಮಾಡಲಿರುವ ದಾಸ

Darshan

Krishnaveni K

ಬೆಂಗಳೂರು , ಬುಧವಾರ, 1 ಜನವರಿ 2025 (09:15 IST)
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಕಳೆದ ಆರು ತಿಂಗಳಿನಿಂದ ಜೈಲು ವಾಸ ಅನುಭವಿಸಿರುವ ನಟ ದರ್ಶನ್ ಇಂದಿನಿಂದ ಡೆವಿಲ್ ಸಿನಿಮಾ ಕೆಲಸ ಮತ್ತೆ ಶುರು ಮಾಡಲಿದ್ದು ಅಭಿಮಾನಿಗಳಿಗೆ ಹೊಸ ವರ್ಷಕ್ಕೆ ಭರ್ಜರಿ ಸುದ್ದಿ ಸಿಕ್ಕಂತಾಗಿದೆ.
 

ಬಂಧನದ ಬಳಿಕ ದರ್ಶನ್ ಸಿನಿಮಾ ಕೆಲಸದಲ್ಲಿ ಮತ್ತೆ ಯಾವಾಗ ತೊಡಗಿಸಿಕೊಳ್ಳಲಿದ್ದಾರೆ ಎಂಬ ಆತಂಕ ಅಭಿಮಾನಿಗಳಲ್ಲಿತ್ತು. ಇದರ ನಡುವೆ ಅವರು ಬೆನ್ನು ನೋವಿನಿಂದಲೂ ಬಳಲುತ್ತಿರುವ ಕಾರಣ ಸದ್ಯಕ್ಕೆ ಸಿನಿಮಾಗೆ ಕಮ್ ಬ್ಯಾಕ್ ಮಾಡಲ್ಲವೇನೊ ಎಂಬ ಅನುಮಾನಗಳಿತ್ತು.

ಆದರೆ ಎಲ್ಲಾ ಅನುಮಾನಗಳನ್ನು ಮೀರಿಸುವಂತಹ ಸುದ್ದಿ ಬಂದಿದೆ. ಇಂದಿನಿಂದಲೇ ದರ್ಶನ್ ಅರ್ಧಕ್ಕೇ ನಿಲ್ಲಿಸಿದ್ದ ಡೆವಿಲ್ ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಸದ್ಯಕ್ಕೆ ಅವರ ಆರೋಗ್ಯ ಪರಿಸ್ಥಿತಿ ನೋಡಿದರೆ ಶೂಟಿಂಗ್ ಕಷ್ಟ. ಹಾಗಾಗಿ ಡಬ್ಬಿಂಗ್ ಕೆಲಸ ಮಾಡಲಿದ್ದಾರೆ.

ಸಿನಿಮಾ ಶೇ.50 ರಷ್ಟು ಶೂಟಿಂಗ್ ಮುಗಿದಿದೆ. ಇಂದಿನಿಂದ ದರ್ಶನ್ ತಮ್ಮ ಪಾಲಿನ ಡಬ್ಬಿಂಗ್ ಶುರು ಮಾಡಲಿದ್ದಾರೆ. ಮುಂದಿನ ತಿಂಗಳು ಆರೋಗ್ಯ ಸುಧಾರಿಸಿದ ಬಳಿಕ ಉಳಿದ ಭಾಗಗಳ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಅವರ ಸಿನಿಮಾಗಾಗಿ ಕಾಯುತ್ತಿರುವ ಡಿ ಬಾಸ್ ಪ್ಯಾನ್ಸ್ ಗೆ ಇದು ನಿಜಕ್ಕೂ ಹೊಸ ವರ್ಷದ ಉಡುಗೊರೆಯಾಗಲಿದೆ. ಪ್ರತೀ ವರ್ಷವೂ ಹೊಸ ವರ್ಷದ ಮೊದಲ ದಿನ ಮತ್ತು ಬರ್ತ್ ಡೇ ದಿನ ಸ್ವಲ್ಪ ಹೊತ್ತಾದರೂ ಕೆಲಸ ಮಾಡುವುದು ದರ್ಶನ್ ಪದ್ಧತಿ. ಇದೀಗ ತಮಗೆ ಹುಷಾರಿಲ್ಲದೇ ಹೋದರೂ ಪದ್ಧತಿಯಂತೆ ಸಿನಿಮಾ ಕೆಲಸದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Ravi Basruru birthday: ಕಿಡ್ನಿ ಮಾರಲು ಮುಂದಾಗಿದ್ದ ಕೆಜಿಎಫ್ ಮ್ಯೂಸಿಕ್ ಡೈರೆಕ್ಟರ್ ರವಿ ಬಸ್ರೂರು