Publish Date: Thu, 12 Sep 2024 (16:05 IST)
Updated Date: Thu, 12 Sep 2024 (16:07 IST)
ಬೆಂಗಳೂರು: ಬಳ್ಳಾರಿ ಜೈಲಿಗೆ ಹೋದ ಬಳಿಕ ಕೇವಲ ಎರಡೇ ವಾರದಲ್ಲಿ ನಟ ದರ್ಶನ್ ತೀರಾ ಸೊರಗಿ ಹೋಗಿದ್ದಾರೆ. ದೈಹಿಕವಾಗಿ ದರ್ಶನ್ ತೀರಾ ಇಳಿದುಹೋಗಿದ್ದಾರೆ ಎಂದು ನೋಡಿದರೇ ಗೊತ್ತಾಗುತ್ತಿದೆ.
ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಅರೆಸ್ಟ್ ಆಗಿದ್ದ ನಟ ದರ್ಶನ್ ಮೊದಲು ಪರಪ್ಪನ ಅಗ್ರಹಾರದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರು. ಆದರೆ ಅಲ್ಲಿ ಅವರಿಗೆ ಜೈಲಿನ ರೌಡಿಶೀಟರ್ ಗಳಿಂದ ರಾಜಾತಿಥ್ಯ ದೊರೆಯುತ್ತಿತ್ತು. ದುಡ್ಡು ಕೊಟ್ಟರೆ ಮದ್ಯ, ಬಿರಿಯಾನಿ ಎಂಬಂತೆ ಬೇಕಿದ್ದೆಲ್ಲವೂ ಸಿಗುತ್ತಿತ್ತು.
ಆದರೆ ಅವರಿಗೆ ಸಿಗುತ್ತಿದ್ದ ರಾಜಾತಿಥ್ಯ ಬಯಲಾದ ಬೆನ್ನಲ್ಲೇ ಅವರನ್ನು ಬಳ್ಳಾರಿ ಜೈಲಿಗೆ ವರ್ಗಾಯಿಸಲಾಗಿತ್ತು. ಇಲ್ಲಿಗೆ ಬಂದ ಮೇಲೆ ದರ್ಶನ್ ರನ್ನು ವಿಐಪಿ ಸೆಲ್ ನಲ್ಲಿ ಪ್ರತ್ಯೇಕವಾಗಿರಿಸಲಿದೆ. ಯಾರೊಂದಿಗೂ ಸಂಪರ್ಕವಿಲ್ಲ. ಜೈಲಿನ ಊಟ, ತಿಂಡಿ ಬಿಟ್ಟು ಬೇರೆ ಏನೂ ಸಿಗುತ್ತಿಲ್ಲ. ಅವರಿಗೆ ಊಟ, ತಿಂಡಿ ಸೇರುತ್ತಿಲ್ಲ. ಈ ಕಾರಣಕ್ಕೆ ಪತ್ನಿ ತಂದುಕೊಟ್ಟ ಡ್ರೈ ಫ್ರೂಟ್ಸ್, ಬಿಸ್ಕಟ್ ತಿಂದು ಕಾಲಕಳೆಯುತ್ತಿದ್ದಾರೆ.
ಹೀಗಾಗಿ ದರ್ಶನ್ ಈಗ ದೈಹಿಕವಾಗಿಯೂ ತೀರಾ ಇಳಿದು ಹೋಗಿದ್ದಾರೆ. ಇಂದು ತಮ್ಮನ್ನು ಭೇಟಿ ಮಾಡಲು ಬಂದ ಪತ್ನಿ ಮತ್ತು ಸಹೋದರನನ್ನು ಕಾಣಲು ವಿಸಿಟರ್ಸ್ ರೂಂಗೆ ಬಂದಾಗ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ. ಬಿಳಿ ಶರ್ಟ್, ಪ್ಯಾಂಟ್ ಧರಿಸಿದ್ದ ದರ್ಶನ್ ತೀರಾ ಇಳಿದುಹೋದವರಂತೆ ಕಂಡುಬರುತ್ತಿದ್ದಾರೆ.