ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ರೆಗ್ಯುಲರ್ ಜಾಮೀನು ಪಡೆದು ಮನೆಯಲ್ಲಿರುವ ನಟ ದರ್ಶನ್ ಗೆ ಪೊಲೀಸರ ಈ ನಿರ್ಧರ ಉರಿಯುವಂತೆ ಮಾಡಲಿದೆ.
ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಐದೂವರೆ ತಿಂಗಳು ಜೈಲು ವಾಸ ಅನುಭವಿಸಿದ ನಟ ದರ್ಶನ್ ಆರೋಗ್ಯದ ನೆಪದಲ್ಲಿ ಮೊದಲು ಮಧ್ಯಂತರ ಜಾಮೀನು ಪಡೆದರು. ಇದೀಗ ಹೈಕೋರ್ಟ್ ಅವರಿಗೆ ರೆಗ್ಯುಲರ್ ಜಾಮೀನನ್ನೂ ನೀಡಿದೆ. ಇದರ ಬೆನ್ನಲ್ಲೇ ದರ್ಶನ್ ಫಾರ್ಮ್ ಹೌಸ್ ಗೆ ಅನುಮತಿ ಪಡೆದು ತೆರಳಿದ್ದು ಕುಟುಂಬ ಸದಸ್ಯರೊಂದಿಗೆ ಹಾಯಾಗಿದ್ದಾರೆ.
ಈ ನಡುವೆ ಅವರು ಮತ್ತೆ ಸಂಕ್ರಾಂತಿ ಬಳಿಕ ಶೂಟಿಂಗ್ ನಲ್ಲೂ ಭಾಗಿಯಾಗಲಿರುವ ಸುದ್ದಿಗಳು ಬಂದಿತ್ತು. ಆದರೆ ಪೊಲೀಸರು ಬೇರೆಯೇ ಲೆಕ್ಕಾಚಾರ ಹಾಕಿದ್ದು ದರ್ಶನ್ ಗೆ ಬೇಲ್ ನೀಡಿರುವುದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಇದೇ ವಾರ ಮೇಲ್ಮನವಿ ಸಲ್ಲಿಸಲಿದ್ದಾರೆ. ಇದಕ್ಕೆ ಗೃಹ ಇಲಾಖೆ ಈಗಾಗಲೇ ಗ್ರೀನ್ ಸಿಗ್ನಲ್ ನೀಡಿದೆ.
ದರ್ಶನ್ ವಿರುದ್ಧ ಹಲ್ಲೆ, ಕೊಲೆ, ರೇಣುಕಾಸ್ವಾಮಿಗೆ ಚಿತ್ರಹಿಂಸೆ ನೀಡಿದ ಆರೋಪ ಮತ್ತು ಸಾಕ್ಷ್ಯನಾಶಕ್ಕೆ ಪ್ರಯತ್ನಿಸಿದ ಆರೋಪಗಳಿವೆ. ಇಷ್ಟೆಲ್ಲಾ ಆರೋಪಗಳಿದ್ದ ವ್ಯಕ್ತಿ ಪ್ರಭಾವಿಯಾಗಿದ್ದು ಆತನಿಗೆ ಬೇಲ್ ನೀಡಿರುವದರಿಂದ ಕೇಸ್ ಹಳ್ಳ ಹಿಡಿಯಬಹುದು ಎಂಬುದು ಪೊಲೀಸರ ಆತಂಕವಾಗಿದೆ.