ಬೆಂಗಳೂರು: ಕಿಚ್ಚ ಸುದೀಪ್ ನಾಯಕರಾಗಿರುವ ಮ್ಯಾಕ್ಸ್ ಸಿನಿಮಾ ಈ ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ ಮಾಡಿದೆ. ಚಿತ್ರತಂಡವೂ ಖುಷಿಯಾಗಿದೆ. ಅದಕ್ಕೆ ಕಾರಣವೂ ಇದೆ.
ಕ್ರಿಸ್ ಮಸ್ ಹಬ್ಬದಂದು ಅಂದರೆ ಡಿಸೆಂಬರ್ 25 ರಂದು ಮ್ಯಾಕ್ಸ್ ಸಿನಿಮಾ ಬಿಡುಗಡೆಯಾಗಿತ್ತು.ಮ್ಯಾಕ್ಸ್ ಸಿನಿಮಾ ಮೊದಲ ದಿನ 8.5 ಕೋಟಿ ರೂ. ಗಳಿಕೆ ಮಾಡಿತ್ತು. ಉತ್ತಮ ಆರಂಭ ಪಡೆದಿದ್ದ ಮ್ಯಾಕ್ಸ್ ಸಿನಿಮಾ ವೀಕೆಂಡ್ ನಲ್ಲಿ ಅದರಲ್ಲೂ ಭಾನುವಾರ 6 ಕೋಟಿ ರೂ. ಗಳಿಕೆ ಮಾಡಿದೆ.
ಮ್ಯಾಕ್ಸ್ ಸಿನಿಮಾ ಬಿಡುಗಡೆಯಾಗಿ ಐದು ದಿನಗಳು ಕಳೆದಿದ್ದು ಚಿತ್ರ ಒಟ್ಟು ಗಳಿಕೆ 28 ಕೋಟಿ ರೂ. ಗಳಿಕೆ ಮಾಡಿದೆ. ಸದ್ಯದ ಮಟ್ಟಿಗೆ ಹೇಳುವುದಾದರೆ ಕನ್ನಡ ಚಿತ್ರರಂಗದಲ್ಲಿ ಇದು ಉತ್ತಮ ಗಳಿಕೆಯೇ ಸರಿ. ಸೋತಿದ್ದ ಚಿತ್ರರಂಗಕ್ಕೆ ಈ ಗೆಲುವು ಬ್ರೇಕ್ ಕೊಟ್ಟಿದೆ.
ಮ್ಯಾಕ್ಸ್ ಸಿನಿಮಾ ಬಗ್ಗೆ ಮೊದಲ ದಿನ ಸೋಷಿಯಲ್ ಮೀಡಿಯಾದಲ್ಲಿ ಕೆಲವರು ನೆಗೆಟಿವ್ ರಿವ್ಯೂ ಮಾಡಿದ್ದರು. ಆದರೆ ಬಳಿಕ ನೆಗೆಟಿವ್ ರಿವ್ಯೂಗಿಂತ ಪಾಸಿಟಿವ್ ರಿವ್ಯೂ ಹೆಚ್ಚಾಗಿತ್ತು.ಇದೇ ಕಾರಣಕ್ಕೆ ಸುದೀರ್ಘ ವೀಕೆಂಡ್ ಇದ್ದಿದ್ದರಿಂದ ಜನ ಫ್ಯಾಮಿಲಿ ಸಮೇತ ಥಿಯೇಟರ್ ಗೆ ಬಂದಿದ್ದಾರೆ. ಇದರಿಂದಾಗಿ ಚಿತ್ರದ ಗಳಿಕೆಯೂ ಭರ್ಜರಿಯಾಗಿದೆ.