Select Your Language

Notifications

webdunia
webdunia
webdunia
webdunia

ಮ್ಯಾಕ್ಸ್ ಪಾರ್ಟಿಯಲ್ಲಿ ಪತ್ನಿ ಜೊತೆ ಹಿಂದೆಂದೂ ಕಂಡಿರದ ಕಿಚ್ಚ ಸುದೀಪ್ ವಿಶೇಷ ವಿಡಿಯೋ

Kiccha Sudeep wife

Krishnaveni K

ಬೆಂಗಳೂರು , ಗುರುವಾರ, 26 ಡಿಸೆಂಬರ್ 2024 (09:29 IST)
Photo Credit: X
ಬೆಂಗಳೂರು: ಎರಡು ವರ್ಷಗಳ ಬಳಿಕ ತಮ್ಮ ಸಿನಿಮಾ ಬಿಡುಗಡೆ ಖುಷಿ ಒಂದಾದರೆ, ಅದಕ್ಕೆ ಸಿಕ್ಕ ಪ್ರತಿಕ್ರಿಯೆ ಇನ್ನೊಂದೆಡೆ. ಕಿಚ್ಚ ಸುದೀಪ್ ಫುಲ್ ಖುಷಿಯಾಗಿದ್ದು ಮನೆಯಲ್ಲಿಯೇ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ.

ನಿನ್ನೆ ಕಿಚ್ಚ ಸುದಿಪ್ ನಾಯಕರಾಗಿರುವ ಮ್ಯಾಕ್ಸ್ ಸಿನಿಮಾ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಸುದಿಪ್ ಮನೆಯಲ್ಲಿಯೇ ಪತ್ನಿ ಪ್ರಿಯಾ ಹಾಗೂ ಆತ್ಮೀಯರ ಜೊತೆ ಕೇಕ್ ಕಟ್ ಮಾಡಿ ಸಂಭ್ರಮಾಚರಣೆ ಮಾಡಿದ್ದಾರೆ.

ಕೇಕ್ ಕಟ್ ಮಾಡುವ ಮೊದಲು ಪತ್ನಿ ಜೊತೆ ಕಳೆದ ವಿಶೇಷ ಕ್ಷಣದ ವಿಡಿಯೋವೊಂದು ಈಗ ವೈರಲ್ ಆಗಿದೆ. ಸುದಿಪ್ ಮತ್ತು ಪ್ರಿಯಾ ಇಬ್ಬರೂ ಪರಸ್ಪರ ಹೆಗಲ ಮೇಲೆ ಕೈ ಹಾಕಿಕೊಂಡು ಮ್ಯಾಕ್ಸ್ ನ ಹಾಡಿಗೆ ಸ್ಟೆಪ್ ಹಾಕಿದ್ದು ಎಲ್ಲರ ಗಮನ ಸೆಳೆಸಿದೆ. ‘ಬಾಸಿಸಮ್ ಕಾಲ ಮುಗಿದೋಯ್ತು. ಇನ್ನೇನಿದ್ದರೂ ಮ್ಯಾಕ್ಸಿಸಮ್’ ಎಂದು ಬರೆದಿರುವ ಕೇಕ್ ಕಟ್ ಮಾಡಿ ಕಿಚ್ಚ ಆತ್ಮೀಯರೊಂದಿಗೆ ಸಂಭ್ರಮಾಚರಿಸಿದ್ದಾರೆ.

ನಿನ್ನೆ ಸಿನಿಮಾ ಪ್ರದರ್ಶನ ಆರಂಭಕ್ಕೆ ಮುನ್ನ ಬೆಳ್ಳಂ ಬೆಳಿಗ್ಗೆಯೇ ಪತಿ ಸುದೀಪ್ ಗಾಗಿ ಪ್ರಿಯಾ ಸುದೀಪ್ ಥಿಯೇಟರ್ ನಲ್ಲಿ ಆರತಿ ಬೆಳಗಿ ಪೂಜೆ ಸಲ್ಲಿಸಿದ್ದರು. ಸಿನಿಮಾ ಪ್ರಿ ರಿಲೀಸ್ ಈವೆಂಟ್ ನಲ್ಲೂ ಪ್ರಿಯಾ ಗಂಡನಿಗೆ ಸಾಥ್ ನೀಡಿದ್ದರು.


Share this Story:

Follow Webdunia kannada

ಮುಂದಿನ ಸುದ್ದಿ

ಮೈಸೂರು ಮೃಗಾಲಯಕ್ಕೆ ಅಮೂಲ್ಯ ಮಕ್ಕಳ ಮೊದಲ ಭೇಟಿ, ನೆನಪಿಗಾಗಿ ಎರಡು ಪ್ರಾಣಿಗಳ ದತ್ತು