Select Your Language

Notifications

webdunia
webdunia
webdunia
webdunia

ಬೆಸ್ಟ್ ಫ್ರೆಂಡ್ ಕೀರ್ತಿ ಸುರೇಶ್ ಮದುವೆಯಲ್ಲಿ ಭಾಗಿಯಾದ ಕನ್ನಡತಿ ಸೋನು ಗೌಡ

Keerthy Suresh Marriage, Sonu Gowda Friend Keerthy Suresh, Sonu Gowda Met Keerthy Suresh

Sampriya

ಬೆಂಗಳೂರು , ಬುಧವಾರ, 25 ಡಿಸೆಂಬರ್ 2024 (16:39 IST)
Photo Courtesy X
ಬೆಂಗಳೂರು: ಈಚೆಗೆ ಬಹುಕಾಲದ ಗೆಳೆಯ ಆಂಟೋನಿ ತಟ್ಟಿಲ್ ಬಹುಭಾಷಾ ನಟಿ ಕೀರ್ತಿ ಸುರೇಶ್ ಮದುವೆಯಾಗಿದ್ದು, ಈ ಸಮಾರಂಭದಲ್ಲಿ ಕನ್ನಡದ ನಟಿ ಸೋನು ಗೌಡ ಭಾಗಿಯಾಗಿದ್ದರು. ಸುಂದರ ಕ್ಷಣಗಳ ಫೋಟೊವನ್ನು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಸೋನು ಗೌಡ ಶೇರ್ ಮಾಡಿದ್ದಾರೆ.

ಎರಡು ಸುಂದರ ಹೃದಯಗಳು ಒಟ್ಟಿಗೆ ಹೊಸ ಪ್ರಯಾಣವನ್ನು ಪ್ರಾರಂಭಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗುವುದು ತುಂಬಾ ಖುಷಿಯ ವಿಚಾರ. ಈ ಸುಂದರ ದಂಪತಿಗೆ ಮತ್ತೊಮ್ಮೆ ಹ್ಯಾಪಿ ಮ್ಯಾರೀಡ್ ಲೈಫ್, ನಿಮ್ಮ ಜೀವನ ಸುಂದರವಾಗಿರಲಿ ಎಂದು ನಟಿ ಸೋನು ಬರೆದು ಶುಭಹಾರೈಸಿದ್ದಾರೆ.

ಮದುವೆಯಲ್ಲಿ ಕೀರ್ತಿ ದಂಪತಿ ಜೊತೆ ತೆಗೆದ ಸುಂದರ ಫೋಟೋವನ್ನು ನಟಿ ಹಂಚಿಕೊಂಡಿದ್ದಾರೆ.

ಈ ಹಿಂದೆ ಸೋನು ಗೌಡ ಅವರು ಕೀರ್ತಿ ಜತೆಗಿನ ಸ್ನೇಹದ ಬಗ್ಗೆ ಮಾತನಾಡಿದ್ದರು. ಕಾಮನ್ ಫ್ರೆಂಡ್
ಮೂಲಕ ಕೀರ್ತಿ ಸುರೇಶ್ ಪರಿಚಯವಾಗಿದ್ದು, ಇದೀಗ ಸೋನು ಅವರಿಗೂ ಕೀರ್ತಿ ಬೆಸ್ಟ್ ಫ್ರೆಂಡ್ ಆಗಿದ್ದಾರೆ. ನಾವು ಫೋನ್‌ನಲ್ಲೂ ಮಾತನಾಡುತ್ತೇವೆ, ಆದರೆ ಸಿನಿಮಾ ಬಗ್ಗೆ ಮಾತನಾಡೋದಿಲ್ಲ, ಕೀರ್ತಿ ಅವರು ಆಹಾರ ಪ್ರಿಯೆ. ಹಾಗಾಗಿ ಆಹಾರದ ವಿಚಾರವಾಗಿ ಹೆಚ್ಚಾಗಿ ಮಾತನಾಡುತ್ತೇವೆ ಎಂದಿದ್ದರು ಸೋನು. ಹಾಗಾಗಿ ನಟಿಯ ಮದುವೆಯಲ್ಲಿ ಸೋನುಗೆ ವಿಶೇಷವಾಗಿ ಆಹ್ವಾನ ನೀಡಲಾಗಿತ್ತು.

ಈ ಮದುವೆಯಲ್ಲಿ ದಳಪತಿ ವಿಜಯ್, ತ್ರಿಷಾ, ಜವಾನ್ ಡೈರೆಕ್ಟರ್ ಅಟ್ಲಿ ದಂಪತಿ, ಕಲ್ಯಾಣಿ ಪ್ರಿಯಾದರ್ಶನ್ ಸೇರಿದಂತೆ ಅನೇಕರು ಭಾಗಿಯಾಗಿ ಶುಭಕೋರಿದರು.


Share this Story:

Follow Webdunia kannada

ಮುಂದಿನ ಸುದ್ದಿ

ಶಿವಣ್ಣನಿಗೆ ಕ್ಯಾನ್ಸರ್ ಆಗಿದ್ದೆಲ್ಲಿ, ಶಸ್ತ್ರಚಿಕಿತ್ಸೆ ನಡೆದಿದ್ದು ಹೇಗೆ: ವೈದ್ಯರ ವಿವರಣೆ (Video)