Select Your Language

Notifications

webdunia
webdunia
webdunia
webdunia

ಮ್ಯಾಕ್ಸ್ ಮೂವಿ: ಕಿಚ್ಚ ಸುದೀಪ್ ಒನ್ ಮ್ಯಾನ್ ಶೋ ನಡುವೆ ಮ್ಯಾಕ್ಸ್ ನಲ್ಲಿ ಥ್ರಿಲ್ಲರ್ ಸ್ಟೋರಿ

Kiccha Sudeep

Krishnaveni K

ಬೆಂಗಳೂರು , ಬುಧವಾರ, 25 ಡಿಸೆಂಬರ್ 2024 (11:07 IST)
Photo Credit: X
ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಾಯಕರಾಗಿರುವ ಸಿನಿಮಾವೊಂದು ಬಹಳ ದಿನಗಳ ನಂತರ ಬಿಡುಗಡೆಯಾದ ಖುಷಿ ಅವರ ಅಭಿಮಾನಿಗಳಲ್ಲಿ ಎದ್ದು ಕಾಣುತ್ತಿತ್ತು. ಈ ಕಾರಣಕ್ಕೆ ಫಸ್ಟ್ ಡೇ ಫಸ್ಟ್ ಶೋ ನೋಡಿದ ಜನ ಸಿನಿಮಾವನ್ನು ಕೊಂಡಾಡುತ್ತಿದ್ದಾರೆ.

ಮ್ಯಾಕ್ಸ್ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಮೊದಲ ಶೋ ನೋಡಿ ಬಂದ ಪ್ರೇಕ್ಷಕರು ಸಿನಿಮಾ ಸೂಪರ್ ಎಂದಿದ್ದಾರೆ. ಇಡೀ ಸಿನಿಮಾವನ್ನು ಕಿಚ್ಚ ಸುದೀಪ್ ಒಬ್ಬರೇ ಹೆಗಲ ಮೇಲೆ ಹೊತ್ತು ನಡೆಯುತ್ತಾರೆ. ಸಿನಿಮಾದಲ್ಲಿ ಕಿಚ್ಚ ಸುದೀಪ್ ಮಾಸ್ ಫೈಟ್, ಡೈಲಾಗ್ ಗಳಿಗೇ ಫುಲ್ ಮಾರ್ಕ್ಸ್.

ಸಾಮಾನ್ಯವಾಗಿ ಇಂತಹ ಸಿನಿಮಾಗಳಲ್ಲಿ ಕತೆ ವೇಗವಾಗಿ ಓಡಲ್ಲ. ಕೇವಲ ಅಬ್ಬರದಲ್ಲೇ ಕಳೆದುಹೋಗುತ್ತದೆ. ಆದರೆ ಮ್ಯಾಕ್ಸ್ ಸಿನಿಮಾ ಹಾಗಲ್ಲ. ಅಬ್ಬರದ ಜೊತೆಗೆ ಕತೆಯೂ ವೇಗವಾಗಿ ಸಾಗುತ್ತದೆ. ಮೊದಲ ಹಾಪ್ ನಲ್ಲಿ ಕಿಚ್ಚನ ಮಾಸ್ ಅಪಿಯರೆನ್ಸ್ ಜೊತೆಗೆ ಕತೆಯೂ ವೇಗವಾಗಿ ಹೋಗುವುದರಿಂದ ಪ್ರೇಕ್ಷಕರು ಖುಷಿಯಾಗಿದ್ದಾರೆ.

ದ್ವಿತೀಯಾರ್ಧದಲ್ಲಿ ಸಸ್ಪೆನ್ಸ್, ಥ್ರಿಲ್ಲಿಂಗ್ ಸನ್ನಿವೇಶಗಳು ಜನರನ್ನು ಸೆಳೆಯುತ್ತಿದೆ. ಅದಕ್ಕೆ ತಕ್ಕಂತೆ ಹಿನ್ನಲೆ ಸಂಗಿತವೂ ಇರುವುದರಿಂದ ಚಿತ್ರಕ್ಕೆ ಸಾಥ್ ಕೊಡುತ್ತದೆ. ಇದು ಒಂದೇ ರಾತ್ರಿಯಲ್ಲಿ ನಡೆಯುವ ಕತೆ. ಪೊಲೀಸ್ ಅಧಿಕಾರಿಯಾಗಿ ಉಗ್ರಂ ಮಂಜು ಮಿಂಚುತ್ತಾರೆ. 

ಬಂಧನದಲ್ಲಿರುವ ರಾಜಕಾರಣಿಗಳ ಮಕ್ಕಳ ಅನುಮಾನಾಸ್ಪದ ಸಾವಾಗುತ್ತದೆ. ಇದನ್ನು ಕಂಡುಹಿಡಿಯುವುದೇ ಚಿತ್ರದ ಕತೆ. ಸುದೀಪ್ ಮ್ಯಾಕ್ಸ್ ಅಲಿಯಾಸ್ ಅರ್ಜುನ್ ಮಹಾಕ್ಷಯ್ ಎನ್ನುವ ಪಾತ್ರ ಮಾಡಿದ್ದಾರೆ. ಕೇವಲ ಒಂದು ರಾತ್ರಿಯಲ್ಲಿ ನಡೆಯುವ ಕತೆ ಇದಾಗಿರುವುದರಿಂದ ಇಲ್ಲಿ ರೊಮ್ಯಾನ್ಸ್, ಫ್ಯಾಮಿಲಿಗೆ ಎಲ್ಲಾ ಹೆಚ್ಚು ಪ್ರಾಧಾನ್ಯತೆಯಿಲ್ಲ. ಹಾಗಂತ ಮೈನಸ್ ಇಲ್ಲವೇ ಇಲ್ಲ ಎಂದಲ್ಲ. ಕಮರ್ಷಿಯಲ್ ಸಿನಿಮಾ ಎಂದಾಗ ಮೈನಸ್ ಗಳು ಸಹಜ. ಅದನ್ನು ಮರೆತು ಎರಡೂವರೆ ಗಂಟೆ ಮನರಂಜನೆ ಒದಗಿಸಬಹುದಾದ ಸಿನಿಮಾ ಇದಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಬಿಕೆ11: ಸಸ್ಯಾಹಾರಿ ಧನರಾಜ್ ಗೆ ಚಿಕನ್ ತಿನಿಸಿ ತಮಾಷೆ ಮಾಡಿದ ಸ್ಪರ್ಧಿಗಳು