Select Your Language

Notifications

webdunia
webdunia
webdunia
webdunia

ಕಿಚ್ಚ ಸುದೀಪ್ ಫ್ಯಾನ್ಸ್ ಕಾಯುತ್ತಿದ್ದ ಆ ಗಳಿಗೆ ಇಂದು ಬಂದೇ ಬಿಟ್ಟಿತು

Kiccha Sudeep
ಬೆಂಗಳೂರು: ಕಿಚ್ಚ ಸುದೀಪ್ ಅಭಿಮಾನಿಗಳು ಬಹಳ ದಿನಗಳಿಂದ ಕಾಯುತ್ತಿದ್ದ ಆ ಗಳಿಗೆ ಇಂದು ಬಂದೇ ಬಿಟ್ಟಿದೆ. ಸುದೀಪ್ ಅಭಿಮಾನಿಗಳಿಗೆ ಇಂದು ಅನೂಪ್ ಭಂಡಾರಿ ಭರ್ಜರಿ ಸುದ್ದಿ ಕೊಡಲಿದ್ದಾರೆ.

ವಿಕ್ರಾಂತ್ ರೋಣ ಬಳಿಕ ಸುದೀಪ್ ಜೊತೆಗೆ ನಿರ್ದೇಶಕ ಅನೂಪ್ ಭಂಡಾರಿ ಮತ್ತೊಂದು ಸಿನಿಮಾ ಮಾಡುವುದಾಗಿ ಘೋಷಿಸಿದ್ದರು. ಈ ಸಿನಿಮಾಗೆ ಬಿಲ್ಲ ರಂಗ ಭಾಷ ಎನ್ನುವ ಟೈಟಲ್ ಕೂಡಾ ಘೋಷಣೆ ಮಾಡಿದ್ದರು. ಆದರೆ ಅದಾದ ಬಳಿಕ ಅವರು ಸೈಲೆಂಟ್ ಆಗಿದ್ದರು. ಹೀಗಾಗಿ ಅಭಿಮಾನಿಗಳು ಎಲ್ಲೇ ಹೋದರೂ ಈ ಸಿನಿಮಾ ಬಗ್ಗೆ ಕೇಳುತ್ತಲೇ ಇದ್ದರು.

ಇದೀಗ ಅಭಿಮಾನಿಗಳ ಬಹು ದಿನಗಳ ಕಾಯುತ್ತಿದ್ದ ಗಳಿಗೆ ಬಂದೇ ಬಿಟ್ಟಿದೆ. ಇಂದು ಬೆಳಿಗ್ಗೆ 10 ಗಂಟೆಗೆ ಬಿಲ್ಲ ರಂಗ ಭಾಷ ಸಿನಿಮಾ ಬಗ್ಗೆ ಮಹತ್ವದ ವಿಚಾರವೊಂದನ್ನು ಹೇಳುವುದಾಗಿ ಅನೂಪ್ ಭಂಡಾರಿ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ.

ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ಕ್ಷಣಗಣನೆ ಶುರುವಾಗಿದ್ದು, ಇದೇ ಹೊತ್ತಿನಲ್ಲಿ ಹೊಸ ಸಿನಿಮಾ ಸುದ್ದಿ ಬರುತ್ತಿದೆ. ಇದರ ನಡುವೆ ಸುದೀಪ್ ಈಗಷ್ಟೇ ಮ್ಯಾಕ್ಸ್ ಸಿನಿಮಾ ಮುಗಿಸಿದ್ದು ಅದು ಇನ್ನೇನು ಬಿಡುಗಡೆಯಾಗಬೇಕಿದೆ. ಮುಂದಿನ ತಿಂಗಳು ಮ್ಯಾಕ್ಸ್ ಸಿನಿಮಾ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ನಡುವೆ ಮತ್ತೊಂದು ಸಿನಿಮಾ ಸುದ್ದಿ ಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೇರೆ ಜೈಲಿಗೆ ಶಿಫ್ಟ್ ಮಾಡದಂತೆ ಕಣ್ಣೀರು ಹಾಕಿದ ದರ್ಶನ್ ಗ್ಯಾಂಗ್‌ನ ಮೂವರು