Select Your Language

Notifications

webdunia
webdunia
webdunia
webdunia

ಮ್ಯಾಕ್ಸ್ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಅಮ್ಮನ ಕೊನೆಯಾಸೆ ಹೇಳಿ ಭಾವುಕರಾದ ಕಿಚ್ಚ ಸುದೀಪ್

Kiccha Sudeep

Krishnaveni K

ಬೆಂಗಳೂರು , ಸೋಮವಾರ, 2 ಡಿಸೆಂಬರ್ 2024 (10:30 IST)
ಬೆಂಗಳೂರು: ಕಿಚ್ಚ ಸುದೀಪ್ ನಾಯಕರಾಗಿರುವ ಮ್ಯಾಕ್ಸ್ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಈ ಹಿನ್ನಲೆಯಲ್ಲಿ ಸುದೀಪ್ ಸೇರಿದಂತೆ ಇಡೀ ಚಿತ್ರತಂಡ ನಿನ್ನೆ ಸುದ್ದಿಗೋಷ್ಠಿ ನಡೆಸಿತ್ತು. ಈ ವೇಳೆ ಸುದೀಪ್ ತಮ್ಮ ತಾಯಿಯ ಕೊನೆಯ ಆಸೆಯನ್ನು ರಿವೀಲ್ ಮಾಡಿದ್ದಾರೆ.

ಕಿಚ್ಚ ಸುದೀಪ್ ತಾಯಿ ಸರೋಜಾ ಸಂಜೀವ್ ಇತ್ತೀಚೆಗಷ್ಟೇ ಅನಾರೋಗ್ಯದಿಂದ ನಿಧನರಾಗಿದ್ದರು. ತಾಯಿಯ ಜೊತೆಗೆ ಸುದೀಪ್ ಗೆ ಭಾರೀ ಅಟ್ಯಾಚ್ ಮೆಂಟ್ ಇತ್ತು. ಈ ಕಾರಣಕ್ಕೆ ಸುದೀಪ್ ತಾಯಿಯ ನಿಧನದ ಬಳಿಕ ತೀರಾ ಕುಗ್ಗಿ ಹೋಗಿದ್ದರು. ಎರಡು ವಾರ ಯಾವುದೇ ಕಾರ್ಯಕ್ರಮಗಳಲ್ಲಿ ಭಾಗಿಯಾಗಿರಲಿಲ್ಲ.

ನಿನ್ನೆ ಮ್ಯಾಕ್ಸ್ ಸಿನಿಮಾ ಸುದ್ದಿಗೋಷ್ಠಿಯಲ್ಲೂ ಸುದೀಪ್ ತಮ್ಮ ತಾಯಿಯನ್ನು ನೆನಪು ಮಾಡಿಕೊಂಡಿದ್ದಾರೆ. ಎರಡೂವರೆ ವರ್ಷಗಳ ಬಳಿಕ ಸುದೀಪ್ ನಾಯಕರಾಗಿರುವ ಸಿನಿಮಾವೊಂದು ರಿಲೀಸ್ ಆಗುತ್ತಿದೆ. ಈ ಸಿನಿಮಾ ಚಿತ್ರೀಕರಣ ಆರಂಭವಾಗಿಯೇ ಒಂದು ವರ್ಷದ ಮೇಲಾಗಿದೆ. ಹೀಗಾಗಿ ಈ ಸಿನಿಮಾ ಬಗ್ಗೆ ಅವರ ತಾಯಿಗೂ ಕುತೂಹಲವಿತ್ತಂತೆ.

ಸಿನಿಮಾ ಚಿತ್ರೀಕರಣವಾಯ್ತಾ, ಸಿನಿಮಾ ತೋರಿಸು ಎಂದು ಅಮ್ಮ ಕೇಳುತ್ತಲೇ ಇದ್ದರು. ಅವರಿಗೆ ಈ ಸಿನಿಮಾವನ್ನು ನೋಡಬೇಕು ಎಂದು ತುಂಬಾ ಆಸೆಯಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಅವರ ಆ ಕೊನೆ ಆಸೆ ಈಡೇರಲಿಲ್ಲ ಎಂಬ  ಬೇಸರ ನನಗಿದೆ ಎಂದು ಸುದೀಪ್ ಹೇಳಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

BigBoss Season 11: ಈ ವಾರ ಈ ಸ್ಪರ್ಧಿನೇ ದೊಡ್ಮನೆಯಿಂದ ಔಟ್‌