Select Your Language

Notifications

webdunia
webdunia
webdunia
webdunia

ಅಮ್ಮನನ್ನು ಕಳೆದುಕೊಂಡ ಬಳಿಕ ಮೊದಲ ಬಾರಿಗೆ ಶೂಟಿಂಗ್ ನಲ್ಲಿ ಕಿಚ್ಚ ಸುದೀಪ್

Kiccha Sudeep

Krishnaveni K

ಬೆಂಗಳೂರು , ಶನಿವಾರ, 2 ನವೆಂಬರ್ 2024 (10:39 IST)
ಬೆಂಗಳೂರು: ತಮ್ಮ ಪ್ರೀತಿಯ ತಾಯಿಯನ್ನು ಕಳೆದುಕೊಂಡ ಬಳಿಕ ಕಳೆದ 10 ದಿನಗಳಿಂದ ಸಾರ್ವಜನಿಕ ಜೀವನದಿಂದ ದೂರವೇ ಉಳಿದಿದ್ದ ನಟ ಕಿಚ್ಚ ಸುದೀಪ್ ಇದೀಗ ಮೊದಲ ಬಾರಿಗೆ ಶೂಟಿಂಗ್ ನಲ್ಲಿ ಭಾಗಿಯಾಗುತ್ತಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 11 ರ ಶೂಟಿಂಗ್ ಮಾಡುತ್ತಿರುವಾಗಲೇ ಅವರಿಗೆ ಅಮ್ಮನ ಅನಾರೋಗ್ಯದ ಸುದ್ದಿ ತಲುಪಿತ್ತು. ಹಾಗಿದ್ದರೂ ಶೂಟಿಂಗ್ ಅರ್ಧಕ್ಕೇ ನಿಲ್ಲಿಸದೇ ಪೂರ್ತಿ ಮಾಡಿಯೇ ನೇರವಾಗಿ ಅಮ್ಮನನ್ನು ನೋಡಲು ಆಸ್ಪತ್ರೆಗೆ ತೆರಳಿದ್ದರು. ಆದರೆ ಅವರಿಗೆ ಅಮ್ಮನ ಜೊತೆ ಕೊನೆಯದಾಗಿ ಮಾತನಾಡಲೂ ಸಾಧ್ಯವಾಗಿರಲಿಲ್ಲ.

ಅಮ್ಮನ ಕಳೆದುಕೊಂಡ ದುಃಖದಲ್ಲಿದ್ದ ಸುದೀಪ್ ಕಳೆದ ವಾರದ ಬಿಗ್ ಬಾಸ್ ವೀಕೆಂಡ್ ಎಪಿಸೋಡ್ ನಲ್ಲಿ ನಿರೂಪಣೆ ಮಾಡಿರಲಿಲ್ಲ. ಅವರ ಬದಲಿಗೆ ಯೋಗರಾಜ್ ಭಟ್ ಮತ್ತು ಸೃಜನ್ ಲೋಕೇಶ್ ಎರಡು ದಿನಗಳನ್ನು ನಿಭಾಯಿಸಿದರು. ಇದೀಗ ಈ ವಾರ ಸುದೀಪ್ ಮತ್ತೆ ಎಂದಿನಂತೆ ವೀಕೆಂಡ್ ಎಪಿಸೋಡ್ ನಡೆಸಿಕೊಡಲಿದ್ದಾರೆ.

ಈ ಬಗ್ಗೆ ಪ್ರೋಮೋ ಬಿಟ್ಟಿರುವ ಕಲರ್ಸ್ ವಾಹಿನಿ ವಾರದ ಕತೆ ಕಿಚ್ಚನ ಜೊತೆ ಎಂದಿದೆ. ಆದರೆ ಸುದೀಪ್ ಭಾಗಿಯಾಗಿರುವ ಪ್ರೋಮೋ ಇನ್ನೂ ಬಿಟ್ಟಿಲ್ಲ. ಆದರೆ ಈ ವಾರ ಅವರು ಬರುವುದು ಪಕ್ಕಾ ಎಂದಿದೆ. ಇತ್ತ ಸ್ಪರ್ಧಿಗಳೂ ಕಿಚ್ಚನ ಎದುರು ಹಲವು ವಿಚಾರಗಳನ್ನು ಹಂಚಿಕೊಳ್ಳಲು ಕಾಯುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಪತ್ರೆ ಸೇರಿರುವ ನಟ ದರ್ಶನ್ ಸ್ಥಿತಿ ಏನಾಗಿದೆ, ವೈದ್ಯರು ನೀಡಿದ್ದಾರೆ ಡೆಡ್ ಲೈನ್