Select Your Language

Notifications

webdunia
webdunia
webdunia
webdunia

ತಾಯಿಯನ್ನು ಕಳೆದುಕೊಂಡ ಕಿಚ್ಚ ಸುದೀಪ್‌ಗೆ ನರೇಂದ್ರ ಮೋದಿ ಪತ್ರ

Actor Kiccha Sudeep Mother, Prime Minister Narendra Modi, Kiccha Sudeep Mother Saroja

Sampriya

ಬೆಂಗಳೂರು , ಸೋಮವಾರ, 28 ಅಕ್ಟೋಬರ್ 2024 (16:48 IST)
Photo Courtesy X
ಬೆಂಗಳೂರು:  ಕನ್ನಡದ ಖ್ಯಾತ ನಟ ಸುದೀಪ್ ತಾಯಿ ಸರೋಜ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿ, ಸುದೀಪ್‌ಗೆ ಪತ್ರ ಬರೆದಿದ್ದಾರೆ.

ಪತ್ರದಲ್ಲಿ ನಿಮ್ಮ ತಾಯಿ ಸರೋಜ ಸಂಜೀವ ಅವರ ನಿಧನ ಸುದ್ಧಿ ಕೇಳಿ ದುಃಖವಾಯಿತು. ತಾಯಿಯ ಅಗಲಿಕೆ ಜೀವನದಲ್ಲಿ ಭರಿಸಲಾಗದ ನಷ್ಟ. ಈ ನೋವುನ್ನು ತಡೆದುಕೊಳ್ಳುವ ಶಕ್ತಿಯನ್ನು ಆ ದೇವರು ನೀಡಲಿ ಎಂದು ಸುದೀಪ್‌ಗೆ ಮೋದಿ ಅವರು ಪತ್ರ ಬರೆದಿದ್ದರು.

ಈ ಪತ್ರವನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡ ನಟ ಕಿಚ್ಚ ಸುದೀಪ್‌ ಅವರು ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದರು.

 ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಜಿ...ನಿಮ್ಮ ಸಹಾನುಭೂತಿಯ ಸಂತಾಪ ಪತ್ರಕ್ಕಾಗಿ ಪ್ರಾಮಾಣಿಕ ಧನ್ಯವಾದಗಳು. ನಿಮ್ಮ ಚಿಂತನಶೀಲ ಮಾತುಗಳು  ಈ ಆಳವಾದ ಕಷ್ಟದ ಸಮಯದಲ್ಲಿ ಸಾಂತ್ವಾನದ ಮೂಲಸೆಲೆಯನ್ನು ನೀಡಿದೆ.ನಿಮ್ಮ ಸಾಂತ್ವಾನವು ನನ್ನ ಹೃದಯ ತಟ್ಟಿದೆ.ನಿಮ್ಮ ವಿಶ್ವಾಸಕ್ಕೆ ನಾನು  ಅಭಾರಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಲ್ಲು, ಶಾರುಖ್‌ ಖಾನ್ ಫ್ಯಾನ್ಸ್‌ಗೆ ಸಿಹಿ ಸುದ್ದಿ, 30 ವರ್ಷಗಳ ಬಳಿಕ ಮತ್ತೇ ಕರಣ್ ಅರ್ಜುನ್ ಥಿಯೇಟರ್‌ಗೆ