Select Your Language

Notifications

webdunia
webdunia
webdunia
webdunia

ಒಮರ್ ಅಬ್ದುಲ್ಲಾಗೆ ಪ್ರಧಾನಿ ಅಭಿನಂದನೆ: ಜಮ್ಮು ಕಾಶ್ಮೀರ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ಎಂದ ಮೋದಿ

Prime Minister Narendra Modi

Sampriya

ನವದೆಹಲಿ , ಬುಧವಾರ, 16 ಅಕ್ಟೋಬರ್ 2024 (16:00 IST)
ನವದೆಹಲಿ:  ಜಮ್ಮು-ಕಾಶ್ಮೀರದ ಪ್ರಗತಿಗಾಗಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದೊಂದಿಗೆ ಜತೆಗೂಡಿ ಕೆಲಸ ಮಾಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.

ಒಮರ್ ಅಬ್ದುಲ್ಲಾ ಇಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಪ್ರತಿಜ್ಞಾವಿಧಿ ಬೋಧಿಸಿದರು. ಪ್ರಮಾಣ ವಚನ ಸ್ವೀಕರಿಸಿರುವ ಒಮರ್ ಅಬ್ದುಲ್ಲಾ ಅವರಿಗೆ ಪ್ರಧಾನಿ ಮೋದಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಜಮ್ಮು-ಕಾಶ್ಮೀರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಒಮರ್ ಅಬ್ದುಲ್ಲಾ ಅವರಿಗೆ ಅಭಿನಂದನೆಗಳು. ಜನರ ಸೇವೆ ಮಾಡುವ ಅವರ ಪ್ರಯತ್ನಕ್ಕೆ ಶುಭ ಹಾರೈಕೆಗಳು. ಜಮ್ಮು-ಕಾಶ್ಮೀರದ ಪ್ರಗತಿಗಾಗಿ ಒಮರ್ ಮತ್ತು ಅವರ ತಂಡದೊಂದಿಗೆ ಜತೆಗೂಡಿ ಕೇಂದ್ರ ಸರ್ಕಾರವು ನಿಕಟವಾಗಿ ಕಾರ್ಯ ನಿರ್ವಹಿಸಲಿದೆ ಎಂದು ಹೇಳಿದ್ದಾರೆ.

ಒಮರ್ ಅಬ್ದುಲ್ಲಾ ಜೊತೆ ಐದು ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಸಕೀನಾ ಮಸೂದ್, ಜಾವೇದ್ ದಾರ್, ಜಾವೇದ್ ರಾಣಾ, ಸುರೀಂದರ್ ಚೌಧರಿ ಮತ್ತು ಸತೀಶ್ ಶರ್ಮಾ ಪ್ರಮಾಣ ವಚನ ಸ್ವೀಕರಿಸಿದರು.

2019ರಲ್ಲಿ ಕೇಂದ್ರ ಸರ್ಕಾರ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ಬಳಿಕ ಜಮ್ಮು-ಕಾಶ್ಮೀರದಲ್ಲಿ ಮೊದಲ ಚುನಾಯಿತ ಸರ್ಕಾರ ರಚನೆಗೊಂಡಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Uttar Pradesh: ಮೂತ್ರದಲ್ಲಿ ಚಪಾತಿ ಹಿಟ್ಟು ಕಲಸುತ್ತಿದ್ದ ಮನೆಕೆಲಸದಾಕೆಯ ಶಾಕಿಂಗ್ ವಿಡಿಯೋ ಇಲ್ಲಿದೆ