Select Your Language

Notifications

webdunia
webdunia
webdunia
webdunia

ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ದೀಪಾವಳಿ ಉಡುಗೊರೆ: ಡಿಎ ಮತ್ತು ಡಿಆರ್ ಶೇ. 3 ಹೆಚ್ಚಳಕ್ಕೆ ಸಂಪುಟ ಅಸ್ತು

Prime Minister Narendra Modi

Sampriya

ನವದೆಹಲಿ , ಬುಧವಾರ, 16 ಅಕ್ಟೋಬರ್ 2024 (16:14 IST)
Photo Courtesy X
ನವದೆಹಲಿ: ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ದೀಪಾವಳಿ ಉಡುಗೊರೆ ನೀಡಲು ಹೊರಟಿದೆ. ಡಿಎ ಮತ್ತು ಡಿಆರ್ ಅನ್ನು ಶೇ 3ರಷ್ಟು ಹೆಚ್ಚಿಸಲು ಕೇಂದ್ರ ಸಂಪುಟ ಇಂದು ಅನುಮೋದನೆ ನೀಡಿದೆ.

ಕೇಂದ್ರ ಮಾಹಿತಿ ಮತ್ತು ಪ್ರಸರಣ ಸಚಿವ ಅಶ್ವಿನಿ ವೈಷ್ಣವ್ ಇಂದು ಸಂಜೆ ಅಧಿಕೃತವಾಗಿ ಘೋಷಿಸುವ ನಿರೀಕ್ಷೆ ಇದೆ. ಸರ್ಕಾರದ ಈ ಕ್ರಮವು ಲಕ್ಷಾಂತರ ಕೇಂದ್ರ ಸರ್ಕಾರೀ ಉದ್ಯೋಗಿಗಳು ಹಾಗೂ ಪಿಂಚಣಿದಾರರಿಗೆ ಲಾಭವಾಗಲಿದೆ.

ತುಟ್ಟಿಭತ್ಯೆ ಮತ್ತು ತುಟ್ಟಿಪರಿಹಾರವನ್ನು (ಡಿಆರ್) ಸರ್ಕಾರ ವರ್ಷಕ್ಕೆ ಎರಡು ಬಾರಿ ಹೆಚ್ಚಿಸುತ್ತದೆ. ಜನವರಿ ಮತ್ತು ಜುಲೈನಲ್ಲಿ ಹೆಚ್ಚಳವಾಗುತ್ತದೆ. ಬೆಲೆ ಏರಿಕೆಯ ಬಿಸಿ ತಾಕದಿರಲಿ ಎಂಬ ಕಾರಣಕ್ಕೆ ಸಂಬಳಕ್ಕೆ ಮತ್ತು ಪಿಂಚಣಿಗೆ ಹೆಚ್ಚುವರಿಯಾಗಿ ಡಿಯರ್ನೆಸ್ ಅಲೋಯನ್ಸ್ ಮತ್ತು ಡಿಯರ್ನೆಸ್ ರಿಲೀಫ್ ಅನ್ನು ನೀಡಲಾಗುತ್ತದೆ. ಹಣದುಬ್ಬರ ದರಕ್ಕೆ ಅನುಗುಣವಾಗಿ ಈ ಏರಿಕೆ ಇರುತ್ತದೆ. ಈಗ ಮಾಡಲಿರುವ ಡಿಎ ಮತ್ತು ಡಿಆರ್ ಹೆಚ್ಚಳವು ಜುಲೈ 1ರಿಂದಲೇ ಅನ್ವಯ ಆಗುತ್ತದೆ.

ಸದ್ಯ ಡಿಎ ಅಥವಾ ತುಟ್ಟಿಭತ್ಯೆಯು ಮೂಲವೇತನದ ಶೇ. 50ರಷ್ಟಿದೆ. ಈಗ ಹೆಚ್ಚಳವಾದರೆ ಡಿಎ ಶೇ. 53ಕ್ಕೆ ಏರಲಿದೆ.  ಈಗ್ಗೆ ಕೆಲವಾರ ವರ್ಷಗಳಿಂದಲೂ ಸರ್ಕಾರ ವರ್ಷಕ್ಕೆ ಎರಡು ಬಾರಿ ಶೇ. 4ರಷ್ಟು ಡಿಎ ಮತ್ತು ಡಿಆರ್ ಹೆಚ್ಚಳ ಮಾಡುತ್ತಾ ಬಂದಿದೆ. ಈ ಬಾರಿ ಶೇ. 3ರಷ್ಟು ಮಾತ್ರವೇ ಏರಿಕೆ ಆಗಲಿದೆ. ಜೂನ್ ಅಂತ್ಯಕ್ಕೆ ಮುಂಚಿನ 12 ತಿಂಗಳ ಸರಾಸರಿ ಹಣದುಬ್ಬರ ದರದ ಆಧಾರದ ಮೇಲೆ ಡಿಎ ಮತ್ತು ಡಿಆರ್ ಏರಿಕೆಯನ್ನು ನಿರ್ಧರಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಒಮರ್ ಅಬ್ದುಲ್ಲಾಗೆ ಪ್ರಧಾನಿ ಅಭಿನಂದನೆ: ಜಮ್ಮು ಕಾಶ್ಮೀರ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ಎಂದ ಮೋದಿ