ಬೆಂಗಳೂರು: ಕಿಚ್ಚ ಸುದೀಪ್ ನಾಯಕರಾಗಿರುವ ಮ್ಯಾಕ್ಸ್ ಸಿನಿಮಾ ಬಿಡುಗಡೆಯಾದ ಬೆನ್ನಲ್ಲೇ ಚಿತ್ರತಂಡ ಮಾಡಿದ ಒಂದು ಎಡವಟ್ಟಿನಿಂದ ಟ್ರೋಲ್ ಆಗುತ್ತಿದೆ.
ಮ್ಯಾಕ್ಸ್ ಸಿನಿಮಾವನ್ನು ನಿರ್ಮಿಸಿ, ನಿರ್ದೇಶಿಸಿದ್ದು ತಮಿಳು ಟೀಂ. ತಮಿಳು ನಿರ್ಮಾಣ ಸಂಸ್ಥೆ ಜೊತೆಗೆ ತಮಿಳು ನಿರ್ದೇಶಕ ವಿಜಯ್ ಕಾರ್ತಿಕೇಯ ನಿರ್ದೇಶಿಸಿದ ಸಿನಿಮಾವಿದು. ಈ ಸಿನಿಮಾದ ಟೈಟಲ್ ಕಾರ್ಡ್ ನೋಡಿದ ಪ್ರೇಕ್ಷಕರು ಶಾಕ್ ಆಗಿದ್ದಾರೆ. ಅದಕ್ಕೆ ಕಾರಣವೂ ಇದೆ.
ಕಿಚ್ಚ ಸುದೀಪ್ ಗೆ ಅಭಿನಯ ಚಕ್ರವರ್ತಿ ಎಂಬ ಬಿರುದು ಇದೆ. ಮ್ಯಾಕ್ಸ್ ಸಿನಿಮಾ ಟೈಟಲ್ ಕಾರ್ಡ್ ನಲ್ಲೂ ಇದನ್ನು ಪ್ರದರ್ಶಿಸಲಾಗಿತ್ತು. ಆದರೆ ಹೀಗೆ ಬರೆಯುವಾಗ ಬಹುದೊಡ್ಡ ತಪ್ಪು ಮಾಡಲಾಗಿದೆ. ಚಕ್ರವರ್ತಿ ಎನ್ನುವ ಬದಲು ಚತ್ರವರ್ತಿ ಎಂದು ಬರೆಯಲಾಗಿದೆ. ಇದೇ ವಿಚಾರವನ್ನಿಟ್ಟುಕೊಂಡು ಸೋಷಿಯಲ್ ಮಿಡಿಯಾದಲ್ಲಿ ಟ್ರೋಲ್ ಮಾಡಲಾಗಿದೆ.
ಇದೆಂಥಾ ಚಿತ್ರತಂಡ? ಇಷ್ಟೊಂದು ದೊಡ್ಡ ತಪ್ಪಾಗಿದ್ದರೂ ಗೊತ್ತಾಗಲಿಲ್ಲವೇ? ಕನ್ನಡ ಸರಿಯಾಗಿ ಬರುವ ಯಾರೂ ಅಲ್ಲಿ ಇರಲಿಲ್ಲವೇ? ಎಂದೆಲ್ಲಾ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಕನ್ನಡ ಸಿನಿಮಾ ಆಗಿದ್ದುಕೊಂಡ ಟೈಟಲ್ ನಲ್ಲೇ ಇಷ್ಟು ತಪ್ಪುಗಳಾದರೆ ಹೇಗೆ ಎಂದು ಟ್ರೋಲ್ ಮಾಡಿದ್ದಾರೆ.