ಬೆಂಗಳೂರು: ಕಿಚ್ಚ ಸುದೀಪ್ ನಾಯಕರಾಗಿರುವ ಮ್ಯಾಕ್ಸ್ ಸಿನಿಮಾ ನಿನ್ನೆ ರಾಜ್ಯಾದ್ಯಂತ ಬಿಡುಗಡೆಯಗಿತ್ತು. ಮೊದಲ ದಿನದ ಗಳಿಕೆ ಎಷ್ಟು ಎಂಬ ವಿವರ ಇಲ್ಲಿದೆ ನೋಡಿ.
ಕ್ರಿಸ್ ಮಸ್ ಹಬ್ಬದ ದಿನವೇ ಮ್ಯಾಕ್ಸ್ ಸಿನಿಮಾ ಬಿಡುಗಡೆಯಾಗಿತ್ತು. ಅದೂ ಹಲವು ಸಮಯದ ನಂತರ ಕಿಚ್ಚನ ಸಿನಿಮಾ ಬಂದಿರುವುದರಿಂದ ಅಭಿಮಾನಿಗಳು ಮೊದಲ ದಿನ ಕುತೂಹಲದಿಂದಲೇ ಥಿಯೇಟರ್ ಗೆ ಬಂದಿದ್ದರು. ಮೊದಲ ದಿನ ಅಭಿಮಾನಿಗಳಿಗೆ ನಿರಾಸೆಯಾಗಿರಲಿಲ್ಲ. ಭರ್ಜರಿ ಆಕ್ಷನ್, ಥ್ರಿಲ್ಲರ್ ನೊಂದಿಗೆ ಒಳ್ಳೆಯ ಎಂಟರ್ ಟೈನಿಂಗ್ ಕತೆ ಚಿತ್ರದಲ್ಲಿತ್ತು.
ಮ್ಯಾಕ್ಸ್ ಸಿನಿಮಾ ಮೊದಲ ದಿನ ಬಾಕ್ಸ್ ಆಫೀಸ್ ನಲ್ಲಿ 8.50 ಕೋಟಿ ರೂ. ಗಳಿಕೆ ಮಾಡಿದೆ. ಹಾಗೆ ನೋಡಿದರೆ ಉಪೇಂದ್ರರ ಯುಐ ಸಿನಿಮಾ ಮೊದಲ ದಿನ ಗಳಿಕೆ ಮಾಡಿದ್ದಕ್ಕಿಂತಲೂ ಹೆಚ್ಚು ಗಳಿಕೆ ಮಾಡುವಲ್ಲಿ ಯಶಸ್ವಿಯಾಗಿದೆ. ಯುಐ ಮೊದಲ ದಿನ 7 ಕೋಟಿ ಗಳಿಕೆ ಮಾಡಿತ್ತು.
ಮ್ಯಾಕ್ಸ್ ಪರಭಾಷೆಗಳಲ್ಲೂ ಬಿಡುಗಡೆಯಾಗಿದೆ. ಆದರೆ ಶೇ.80 ರಷ್ಟು ಕನ್ನಡದಲ್ಲೇ ಗಳಿಕೆ ಮಾಡಿದೆ. ಇದೀಗ ಕ್ರಿಸ್ ಮಸ್ ವೀಕೆಂಡ್ ಆಗಿರುವುದರಿಂದ ಈ ವೀಕೆಂಡ್ ನಲ್ಲಿ ಮತ್ತಷ್ಟು ಗಳಿಕೆ ಹೆಚ್ಚಾಗುವ ನಿರೀಕ್ಷೆಯಿದೆ. ಮೊದಲ ದಿನಕ್ಕೆ ಸಿಕ್ಕ ಯಶಸ್ಸಿಗೆ ಚಿತ್ರತಂಡದೊಂದಿಗೆ ಕಿಚ್ಚ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ.