ಬೆಂಗಳೂರು: ಕಿಚ್ಚ ಸುದೀಪ್ ನಾಯಕರಾಗಿರುವ ಮ್ಯಾಕ್ಸ್ ಸಿನಿಮಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕರಾಗಿರುವ ರಾಬರ್ಟ್ ಸಿನಿಮಾ ಗಳಿಕೆಯನ್ನೂ ಮೀರಿಸಲಿದೆ.
ಡಿಸೆಂಬರ್ 25 ರಂದು ಮ್ಯಾಕ್ಸ್ ಸಿನಿಮಾ ಬಿಡುಗಡೆಯಾಗಿತ್ತು. ಮೊದಲ ದಿನವೇ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಕಂಡುಬಂದಿತ್ತು. ಮೊದಲ ದಿನ 8 ಕೋಟಿ ರೂ. ಗಳಿಕೆ ಮಾಡಿದ್ದ ಮ್ಯಾಕ್ಸ್ ಬಳಿಕ ವೀಕೆಂಡ್ ನಲ್ಲೂ ಉತ್ತಮ ಗಳಿಕೆ ಮಾಡಿತ್ತು. ಬಿಡುಗಡೆಯಾಗಿ ಒಂದು ವಾರದವಾದರೂ ಮ್ಯಾಕ್ಸ್ ಹವಾ ಮುಗಿದಿರಲಿಲ್ಲ.
ಇದೀಗ ಒಂದು ವಾರದ ಬಳಿಕ ಚಿತ್ರದ ಗಳಿಕೆ 40 ಕೋಟಿ ರೂ.ಗಳಾಗಿವೆ. ಇನ್ನು ಕೆಲವೇ ಸಮಯದಲ್ಲಿ ಚಿತ್ರದ ಗಳಿಕೆ 50 ಕೋಟಿ ರೂ. ತಲುಪುವ ನಿರೀಕ್ಷೆಯಿದೆ. 50 ಕೋಟಿ ರೂ. ಗಳಿಕೆ ಮಾಡಿದರಲ್ಲಿ ರಾಬರ್ಟ್ ಗಳಿಕೆಯನ್ನು ಮೀರಿಸಲಿದೆ.
2021 ರಲ್ಲಿ ಬಿಡುಗಡೆಯಾಗಿದ್ದ ದರ್ಶನ್ ನಾಯಕರಾಗಿದ್ದ ರಾಬರ್ಟ್ ಸಿನಿಮಾ 50 ಕೋಟಿ ರೂ. ಗಳಿಕೆ ಮಾಡಿತ್ತು. ಹೀಗಾಗಿ ಈಗ ಮ್ಯಾಕ್ಸ್ ಸಿನಿಮಾ ರಾಬರ್ಟ್ ಗಳಿಕೆಯನ್ನು ಹಿಂದಿಕ್ಕಬಹುದು ಎಂದು ನಿರೀಕ್ಷಿಸಲಾಗಿದೆ.