ಬೆಂಗಳೂರು: 95 ದಿನ ಪೂರೈಸಿರುವ ಬಿಗ್‌ಬಾಸ್ ಮನೆಗೆ ಸ್ಪರ್ಧಿಗಳ ಫ್ಯಾಮಿಲಿ ಎಂಟ್ರಿ ಕೊಟ್ಟಿದೆ. ಹಲವು ದಿನಗಳ ಬಳಿಕ ತಮ್ಮ ಮನೆಯವರನ್ನು ನೋಡಿ ಸ್ಪರ್ಧಿಗಳು ಕಣ್ಣೀರು ಹಾಕಿದ್ದಾರೆ.
ತ್ರಿವಿಕ್ರಮ್, ಭವ್ಯ, ಮಂಜು, ಮೋಕ್ಷಿತಾ, ಗೌತಮಿ, ಧನರಾಜ್, ಚೈತ್ರಾ, ರಜತ್ ಹಾಗೂ ಹನಮಂತು ಫ್ಯಾಮಿಲಿ ಅವರು ಬಿಗ್‌ಬಾಸ್ ಮನೆಗೆ ಬಂದಿದ್ದಾರೆ. ತಮ್ಮ ಮನೆ ಮಕ್ಕಳ ಜತೆ ಬಿಗ್‌ಬಾಸ್ ಮನೆಯಲ್ಲಿ ಒಂದು ದಿನವಿದ್ದು ಅವರ ಜತೆ ಕಾಲ ಕಳೆದಿದ್ದಾರೆ.
ಇನ್ನೂ ಹನಮಂತು ಅವರನ್ನು ನೋಡುತ್ತಿದ್ದ ಹಾಗೇ ತಾಯಿ ಕಣ್ಣೀರು ಹಾಕಿದ್ದಾರೆ. ಇದೀಗ ಇಂದು ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದ ಪ್ರೋಮೋದಲ್ಲಿ ಹನಮಂತು ತಾಯಿ ಅವರು ತಮ್ಮ ಸೊಸೆ ಯಾವ ರೀತಿ ಇರಬೇಕೆಂದು ಹೇಳಿದ್ದಾರೆ.
ಲಂಬಾಣಿ ಬಟ್ಟೆ ಧರಿಸಿ ಬಂದ ಹನುಮಂತು ತಾಯಿ ಅವರಲ್ಲಿ ರಜತ್ ನಿಮ್ಮ ಸೊಸೆ ಕೂಡಾ ಈ ರೀತಿಯೇ ಬಟ್ಟೆ ಧರಿಸಬೇಕೆಂದು ಪ್ರಶ್ನೆ ಮಾಡಿದ್ದಾರೆ.
ಅದಕ್ಕೆ ಪ್ರತಿಕ್ರಿಯಿಸಿದ ಹನಮಂತು ತಾಯಿ, ಆಕೆಗಾಗಿ ಈಗಾಗಲೇ ನಾಲ್ಕು ಜತೆ ಬಟ್ಟೆ ಹೊಲಿದು ಇಟ್ಟುಕೊಂಡಿದ್ದೇನೆ. ಕಿವಿ ಒಲೆ ಕೂಡಾ ತೆಗೆದುಕೊಂಡಿದ್ದೇನೆ. ಅದಕ್ಕೆ ರಜತೆ ಹಾಕಲ್ಲ ಅಂದ್ರೆ ಏನ್ ಮಾಡ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಹಾಕಿಕೊಳ್ಳೇಬೇಕು. ನನ್ನ ಹಾಗೆಯೇ ಇರಬೇಕು. ಅದಕ್ಕೆ ಹನಮಂತ ನಡಿತೈತೆ ಎಂದಿದ್ದಾರೆ. ಅದಕ್ಕೆ ಕೌಂಟರ್ ಕೊಟ್ಟ ಅಮ್ಮ, ಅದೆಲ್ಲ ನಡಿಯಲ್ಲ. ಏನಿದ್ರು ನನ್ನದೆ ನಡೆಯುವುದು ಎಂದು ನಗು ಬೀರಿದ್ದಾರೆ.