ಬೆಂಗಳೂರು: ಕಾರ್ತಿಕ್ ಅತ್ತಾವರ ಹಾಗೂ ಅಮೂಲ್ಯ ಗೌಡ ಅವರು ನಾಯಕ ನಾಯಕಿಯಾಗಿ ಅಭಿನಯಿಸಿದಲ್ಲಿ ಇದೀಗ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಶ್ರೀಗೌರಿ ಸೀರಿಯಲ್ ಶೀಘ್ರದಲ್ಲೇ ಮುಕ್ತಾಯವಾಗಲಿದೆ.
ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರವಾಹಿಗಳಲ್ಲಿ ಒಂದಾಗಿದ್ದ ಶ್ರೀಗೌರಿ ಇದೀಗ ಹೊಸ ಸೀರಿಯಲ್‌ಗೆ ದಾರಿ ಮಾಡಿಕೊಡಲು ಅಂತ್ಯ ಮಾಡಲಾಗುತ್ತಿದೆ. ಇದೇ ಡಿಸೆಂಬರ್ 22ಕ್ಕೆ ಅಂದರೆ ಭಾನುವಾರ ತನ್ನ ಕೊನೆಯ ಸಂಚಿಕೆ ಪ್ರಸಾರವಾಗಲಿದೆ.
ಡಿಸೆಂಬರ್ 23ರಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಶುರುವಾಗುತ್ತಿರುವ ಹೊಸ ಕತೆಯ ಸೀರಿಯಲ್‌ಗೆ ಇದು ಜಾಗ ಮಾಡಿಕೊಡುತ್ತಿದೆ.
ಕರಾವಳಿಯ ಸೊಗಡಿನೊಂದಿಗೆ ಶುರುವಾದ ಶ್ರೀಗೌರಿ ಸೀರಿಯಲ್ ತನ್ನದೇ ಆದ ವೀಕ್ಷಕರನ್ನು ಹೊಂದಿತ್ತು. ತಾಯಿ ಮಂಗಳಮ್ಮ ಹಾಗೂ ಮಗ ಅಪ್ಪು ನಡುವಿನ ಬಾಂಧವ್ಯದೊಂದಿಗೆ ಶುರುವಾದ ಶ್ರೀಗೌರಿ ಸೀರಿಯಲ್ ಹೆಚ್ಚು ಜನಪ್ರಿಯತೆ ಪಡೆಯಿತು. ಗೌರಿ ಹಾಗೂ ಅಪ್ಪು ಮದುವೆ ಬಳಿಕ ಈ ಸ್ಟೋರಿ ಇನ್ನೊಂದು ತಿರುವಿನಲ್ಲಿ ನಡೆಯುತ್ತಿದೆ. ಇದೀಗ ಏಕಾಏಕಿ ಈ ಸೀರಿಯಲ್‌ಗೆ ಅಂತ್ಯ ಹಾಡುತ್ತಿದ್ದು, ಅಭಿಮಾನಿಗಳಿಗೆ ಬೇಸರ ತಂದಿದೆ.