Select Your Language

Notifications

webdunia
webdunia
webdunia
webdunia

ಜಾಮೀನು ಪ್ರಕ್ರಿಯೆ ಮುಗಿಸಿ, ಆಸ್ಪತ್ರೆಗೆ ವಾಪಾಸ್ಸಾದ ನಟ ದರ್ಶನ್‌

Actor Darshan Thoogudeep Discharged, Pavitra Gowda, Vijayalakshmi Darshan

Sampriya

ಬೆಂಗಳೂರು , ಸೋಮವಾರ, 16 ಡಿಸೆಂಬರ್ 2024 (17:18 IST)
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಸಿಕ್ಕ ಬೆನ್ನಲ್ಲೇ ನಟ ದರ್ಶನ್ ಸೋಮವಾರ ಸೆಷನ್ಸ್ ಕೋರ್ಟ್ ಮುಂದೆ ಹಾಜರಾಗಿ ಜಾಮೀನು ಪ್ರಕ್ರಿಯೆ ಪೂರ್ಣಗೊಳಿಸಿ, ವಾಪಾಸ್ ಬಿಜಿಎಸ್ ಆಸ್ಪತ್ರೆಗೆ ಬಂದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ನಟ ದರ್ಶನ್ ಅವರು ಆಸ್ಪತ್ರೆಯಿಂದ ಹೊರಬಂದು ಕಾರು ಹತ್ತಿರುವ ವಿಡಿಯೋ ವೈರಲ್ ಆಗಿತ್ತು. ಇದನ್ನು ನೋಡಿ ದರ್ಶನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರೂ ಎಂಬ ಸುದ್ದಿ ಹರಿದಾಡಿತ್ತು. ಆದರೆ ದರ್ಶನ್ ಜಾಮೀನು ಪ್ರಕ್ರಿಯೆ ನಡೆಸಲು ಆಸ್ಪತ್ರೆಯಿಂದ ನೇರವಾಗಿ ಸೆಷನ್ಸ್ ಕೋರ್ಟ್ ಮುಂದೆ ಹಾಜರಾದರು. ಇನ್ನೂ ದರ್ಶನ್ ಜಾಮೀನಿಗೆ ಸ್ನೇಹಿತ, ನಟ ಧನ್ವೀರ್ ಮತ್ತು ಸಹೋದರ ದಿನಕರ್ ಶ್ಯೂರಿಟಿ ನೀಡಿದರು.

ಶ್ಯೂರಿಟಿ ವೇಳೆ, ದರ್ಶನ್ ನಿಮಗೆ ಏನಾಗಬೇಕು ಎಂದು ಜಡ್ಜ್ ಕೇಳಿದರು. ಅದಕ್ಕೆ, ಸ್ನೇಹಿತ ಮತ್ತು ಸಹೋದರ ಎಂದು ಧನ್ವೀರ್ ಮತ್ತು ದಿನಕರ್ ಹೇಳಿದರು. ಕೊನೆಗೆ ಜಾಮೀನು ಪ್ರಕ್ರಿಯೆ ಪೂರ್ಣಗೊಳಿಸಿ ದರ್ಶನ್ ಮತ್ತೆ ಆಸ್ಪತ್ರೆಗೆ ಚಿಕಿತ್ಸೆಗಾಗಿ ವಾಪಾಸ್ಸಾಗಿದ್ದಾರೆ.

ಇನ್ನೂ ಕೋರ್ಟ್‌ನಲ್ಲಿಯೂ ನಟ ದರ್ಶನ್ ಅವರು ಅನಾರೋಗ್ಯ ಸಮಸ್ಯೆಯನ್ನು ತೋರಿಸಿದರು. ಕುಂಟುತ್ತಲೇ ಕೋರ್ಟ್‌ಗೆ ಆಗಮಿಸಿದ ದರ್ಶನ್‌ಗೆ ಒಳಗೆ ನಿಲ್ಲಲು ಪರದಾಡಿದರು.  ಕೋರ್ಟ್ ಹೊರಭಾಗದಲ್ಲಿ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿತ್ತು. ಜನ ಸೇರದಂತೆ ಸಿಟಿ ಸಿವಿಲ್ ಕೋರ್ಟ್ ಹೊರಭಾಗದಲ್ಲಿ ಪೊಲೀಸರ ಭದ್ರತೆ ವ್ಯವಸ್ಥೆ ಮಾಡಲಾಗಿತ್ತು. ಇದನ್ನೂ ಓದಿ: ಇಂದು ಪರಪ್ಪನ ಅಗ್ರಹಾರ ಜೈಲಿನಿಂದ ಪವಿತ್ರಗೌಡ ರಿಲೀಸ್

ದರ್ಶನ್‌ಗೆ ಬುಧವಾರದವರೆಗೂ ಚಿಕಿತ್ಸೆ ಮುಂದುವರಿಯುವ ಸಾಧ್ಯತೆ ಇದೆ. ಬಹುತೇಕ ಗುರುವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಬಹುದು ಎಂದು ಹೇಳಲಾಗಿದೆ. ವೈದ್ಯರ ಸಲಹೆ ಪಡೆದು ನಂತರ ದರ್ಶನ್ ಡಿಸ್ಚಾರ್ಜ್ ಆಗಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ದರ್ಶನ್ ಆಂಡ್ ಗ್ಯಾಂಗ್ ಗೆ ಶ್ಯೂರಿಟಿ ಕೊಟ್ಟವರು ಯಾರು