ಬೆಂಗಳೂರು: ಚಿತ್ರದುರ್ಗಾದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್‌ಗೆ ಹೈಕೋರ್ಟ್ ಇಂದು ಜಾಮೀನು ಮಂಜೂರು ಮಾಡುತ್ತಿದ್ದ ಹಾಗೇ ಪತ್ನಿ ವಿಜಯಲಕ್ಷ್ಮಿ ಇನ್‌ಸ್ಟಾಗ್ರಾಂನಲ್ಲಿ ಸ್ಟೋರಿ ಪೋಸ್ಟ್ ಮಾಡಿದ್ದಾರೆ.
ದರ್ಶನ್ ಈಗಾಗಲೇ ಮಧ್ಯಂತರ ಜಾಮೀನು ಅಡಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಪತಿಯನ್ನು ಈ ಪ್ರಕರಣದಿಂದ ಹೊರತರಲು ವಿಜಯಲಕ್ಷ್ಮಿ ಸತತ ಕಾನೂನು ಹೋರಾಟದ ಜತೆಗೆ ದೇವರ ಮೊರೆ ಹೋಗಿದ್ದರು.
ಅಂದು ಮಧ್ಯಂತರ ಜಾಮೀನು ಸಿಕ್ಕ ಬೆನ್ನಲ್ಲೇ ವಿಜಯಲಕ್ಷ್ಮಿ ಅವರು ಬಳ್ಳಾರಿಯ ಫವರ್ ಫುಲ್ ದೇವಿಯ ದರ್ಶನ ಪಡೆದು ದರ್ಶನ್‌ರನ್ನು ಜೈಲಿನಿಂದ ಹೊರತಂದಿದ್ದರು. ಅದಲ್ಲದೆ ದರ್ಶನ್ ಈ ಪ್ರಕರಣದಿಂದ ಬೇಗ ಹೊರಬರಲೆಂದು ಚಾಮುಂಡೇಶ್ವರಿ, ಕೊಲ್ಲೂರು ಮೂಕಾಂಬಿಕೆ ದೇವಿ, ಕಾಮಾಕ್ಯ ದೇವಿ, ಮಂತ್ರಾಲಯ ಹೀಗೇ ಹಲವು ಫವರ್ ಫುಲ್ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದರು.
ಇದೀಗ ದರ್ಶನ್‌ಗೆ ಈ ಪ್ರಕರಣದಲ್ಲಿ ಜಾಮೀನು ಮಂಜೂರು ಆಗುತ್ತಿದ್ದ ಹಾಗೇ, ವಿಜಯಲಕ್ಷ್ಮಿ ಅವರು ಇನ್‌ಸ್ಟಾಗ್ರಾಂನಲ್ಲಿ ದೇವರ ಸನ್ನಿಧಿಯಲ್ಲಿ ಕೈಯಲ್ಲಿ ಹೂ ಹಿಡಿದು ಸಮರ್ಪಿಸುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ನಮೋ ನಮೋ ಶಂಕರ ಎಂದು ಅದಕ್ಕೆ ಹಾಡನ್ನು ಹಾಕಿದ್ದಾರೆ.