Select Your Language

Notifications

webdunia
webdunia
webdunia
webdunia

ರೇಣುಕಾಸ್ವಾಮಿ ಪ್ರಕರಣದಲ್ಲಿ ಇನ್ನೂ ಬಿಡುಗಡೆ ಭಾಗ್ಯದ ಸಿಗದ ಆರೋಪಿಗಳು ಇವರೇ

Renukaswamy Case, Pavitra Gowda Released, Darshan Thoogudeep

Sampriya

ಬೆಂಗಳೂರು , ಶುಕ್ರವಾರ, 13 ಡಿಸೆಂಬರ್ 2024 (19:42 IST)
Photo Courtesy X
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಇಂದು 7 ಆರೋಪಿಗಳಿಗೆ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದ್ದು, ಇನ್ನೂ 6 ಆರೋಪಿಗಳಿಗೆ ಜೈಲೇ ಗತಿಯಾಗಿದೆ.

ಪ್ರಕರಣ ಸಂಬಂಧ ಇಂದು ನಟ ದರ್ಶನ್, ಪವಿತ್ರಾ ಗೌಡ, ಆರ್‌. ನಾಗರಾಜು, ಎಂ.ಲಕ್ಷ್ಮಣ್‌, ಅನು ಕುಮಾರ್‌ ಅಲಿಯಾಸ್, ಅನು, ಜಗದೀಶ್ ಅಲಿಯಾಸ್ ಜಗ್ಗ, ಪ್ರದೋಷ್‌ ರಾವ್ ಅವರು ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದ್ದು, ಬಿಗ್‌ ರಿಲೀಫ್ ಸಿಕ್ಕಿದೆ. ಸುದೀರ್ಘ ವಾದ-ಪ್ರತಿವಾದ ಆಲಿಸಿ ನ್ಯಾಯಮೂರ್ತಿ ಎಸ್‌. ವಿಶ್ವಜಿತ್‌ ಶೆಟ್ಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಇಂದು ಮಧ್ಯಾಹ್ನ ತೀರ್ಪು ಪ್ರಕಟಿಸಿದೆ.

ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣ ಸಂಬಂಧ ದರ್ಶನ್‌, ಪವಿತ್ರಾ ಗೌಡ ಸೇರಿ ಒಟ್ಟು 17 ಆರೋಪಿಗಳು ಜೈಲು ಸೇರಿದ್ದರು. ಇನ್ನೂ ಪ್ರಕರಣದ ಆರೋಪಿಯಾದ ಕೇಶವಮೂರ್ತಿಗೆ ಸೆಪ್ಟೆಂಬರ್‌ 24ರಂದು ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಆದೇ ದಿನ 15 ಹಾಗೂ 17ನೇ ಆರೋಪಿಗಳಾದ ಕಾರ್ತಿಕ್ ಹಾಗೂ ನಿಖಿಲ್ ನಾಯಕ್ ಅವರಿಗೆ 57ನೇ ಸಿಸಿಎಚ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು.

ಆದರೆ 17ಆರೋಪಿಗಳಲ್ಲಿ ಇನ್ನು ಹಲವರು ಜಾಮೀನು ಸಿಗದೆ ಜೈಲಿನಲ್ಲಿಯೇ ಇದ್ದಾರೆ.  ಪ್ರಕರಣದ ಮೂರನೇ ಆರೋಪಿಯಾದ ಪವನ್ ಕೆ. ಅಲಿಯಾಸ್‌ ಪುಟ್ಟಸ್ವಾಮಿ, 4ನೇ ಆರೋಪಿ ರಾಘವೇಂದ್ರ ಅಲಿಯಾಸ್‌ ನಾಗರಾಜ್, 8ನೇ ಆರೋಪಿ ರವಿಶಂಕರ್ ಅಲಿಯಾಸ್‌ ರವಿ 9ನೇ ಆರೋಪಿ ಧನರಾಜ್‌ ಅಲಿಯಾಸ್‌ ರಾಜು, 10ನೇ ಆರೋಪಿ ವಿನಯ್ ಅಲಿಯಾಸ್‌ ವೆಂಕಟರೆಡ್ಡಿ, 13ನೇ ಆರೋಪಿ ದೀಪಕ್‌ ಅವರಿಗೆ ಜಾಮೀನು ಸಿಕ್ಕಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಅಪ್ಪನಿಗೆ ಜಾಮೀನು ಸಿಗುತ್ತಿದ್ದ ಹಾಗೇ ಫೋಟೋ ಹಾಕಿ ಖುಷಿ ವ್ಯಕ್ತಪಡಿಸಿದ ವಿನೀಶ್‌