ಬೆಂಗಳೂರು: 95ದಿನ ಪೂರೈಸಿರುವ ಬಿಗ್‌ಬಾಸ್ ಸೀಸನ್ 11ರಲ್ಲಿ ಇದೀಗ ಫ್ಯಾಮಿಲಿ ರೌಂಡ್ ಆರಂಭವಾಗಿದೆ. ಈಗಾಗಲೇ ದೊಡ್ಮನೆಗೆ ಭವ್ಯ, ತ್ರಿವಿಕ್ರಮ್, ಮೋಕ್ಷಿತಾ, ಗೌತಮಿ ಹಾಗೂ ಉಗ್ರಂ ಮಂಜು ಅವರ ಫ್ಯಾಮಿಲಿ ಎಂಟ್ರಿ ಕೊಟ್ಟಿದ್ದಾರೆ.
ಇಂದು ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದ ಪ್ರೋಮೋದಲ್ಲಿ ಧನರಾಜ್, ಹನಮಂತ ಹಾಗೂ ಚೈತ್ರಾ ಅವರ ಫ್ಯಾಮಿಲಿ ಎಂಟ್ರಿ ಕೊಟ್ಟಿದ್ದಾರೆ.
ಎರಡು ತಿಂಗಳಿಗೂ ಹೆಚ್ಚು ಕಾಲ ಮನೆ, ಕುಟುಂಬದಿಂದ ದೂರವಿದ್ದ ಸದಸ್ಯರು ಹೆತ್ತವರನ್ನು ಕಂಡು ಕಣ್ಣೀರಾದರು. ಅಮ್ಮನ ಪ್ರೀತಿಯ ಅಪ್ಪುಗೆಯಲ್ಲಿ ಮಗುವಾಗಿ ಕೈತುತ್ತು ತಿಂದು, ಅಪ್ಪನ ಧೈರ್ಯದ ಮಾತುಗಳಿಗೆ ಕಿವಿಯಾದರು. ಮಡದಿಮಕ್ಕಳನ್ನು ಕಂಡು ಹೆಮ್ಮೆಯಿಂದ ಬೀಗಿದರು.
ಇನ್ನೂ ಮದುವೆ ವಾರ್ಷಿಕೋತ್ಸವ ದಿನವೇ ಗೌತಮಿ ಅವರ ಪತಿ ಅಭಿಷೇಕ್ ಅವರು ಬಿಗ್‌ಬಾಸ್ ಮನೆಗೆ ಬಂದಿದ್ದಾರೆ. ಅದಲ್ಲದೆ ರೊಮ್ಯಾಂಟಿಕ್ ಆಗಿ ಆಚರಿಸಿಕೊಂಡರು.
ಇನ್ನೊಂದೆಡೆ, ಗಾಯಕ ಹನಮಂತು ಅವರ ಅಪ್ಪ ಅಮ್ಮ ಉತ್ತರ ಕರ್ನಾಟಕ ಶೈಲಿಯ ಬುತ್ತಿ ಹೊತ್ತು ದೊಡ್ಮನೆ ಪ್ರವೇಶಿಸಿ ಮನೆಮಂದಿಗೆ ರೊಟ್ಟಿ ಊಟ ನೀಡಿದ್ದಾರೆ.