ಬಿಗ್‌ಬಾಸ್ ಸೀಸನ್ 11ರ ಶುರುವಾಗಿ ಮೂರು ತಿಂಗಳಾಗಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಮುಗಿಯಲಿದೆ. ಇದೀಗ ದೊಡ್ಮನೆಗೆ ಸ್ಪರ್ಧಿಗಳು ಮನೆಯವರು ಎಂಟ್ರಿಕೊಡುತ್ತಿದ್ದಾರೆ. ಈಗಾಗಲೇ ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದ ಪ್ರೋಮೋದಲ್ಲಿ ತ್ರಿವಿಕ್ರಮ್, ಭವ್ಯಾ ಅವರ ಫ್ಯಾಮಿಲಿ ಎಂಟ್ರಿ ಕೊಟ್ಟಿದ್ದಾರೆ.
ಇದೀಗ ಕಲರ್ಸ್ ಕನ್ನಡ ಬಿಟ್ಟ ಪ್ರೋಮೋದಲ್ಲಿ ರಜತ್ ಫ್ಯಾಮಿಲಿ ಮನೆಗೆ ಎಂಟ್ರಿ ಕೊಟ್ಟಿದೆ. ತರಲೆ ಮಾಡೋ ಪತಿ ರಜತ್‌ಗೆ ಪತ್ನಿ ಸಖತ್ ಆಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಮೊದಲು ಬಿಗ್ ಬಾಸ್‌ಗೆ ರಜತ್ ಪತ್ನಿ ಅಕ್ಷಿತಾ ಬಂದಿದ್ದರು. ಆಗ ರಜತ್ ಹೆಂಡತಿಗೆ ನನ್ನ ಮಗಳು ಎಲ್ಲಿ ಅಂತ ಕೇಳಿದರು. ಆಗ ಬಂದಿಲ್ಲ ಅಂತ ಸುಳ್ಳು ಹೇಳಿದ್ದರು. ಆಗ ರಜತ್ ಬಿಗ್ ಬಾಸ್ ಇವರನ್ನು ಆಚೆ ಕಳುಹಿಸಿ ಡೋರ್ ಓಪನ್ ಮಾಡಿ ಅಂತ ಹೇಳಿದ್ದಾರೆ. ಬಳಿಕ ಮನೆ ಮಂದಿಯ ಎದುರು ಏನು ಎಲ್ಲರ ತೊಡೆ ಮೇಲೆ ಹೋಗಿ ಕುಳಿತುಕೊಳ್ಳುತ್ತೀದ್ದೀರಾ? ಏನ್ ಕಥೆ ಎಂದು ರಜತ್ ಪತ್ನಿ ಪ್ರಶ್ನೆ ಮಾಡಿದ್ದಾರೆ. ಅದಷ್ಟೇ ಅಲ್ಲ, ಐಶ್ವರ್ಯಾ ನೋಡಿ ಏನ್ ಅಂದ್ರಿ ಅವತ್ತು ಎಂದು ಕೇಳಿದ್ದಾರೆ. ಅದಕ್ಕೆ ರಜತ್, ಐಶ್ವರ್ಯಾ ಸಖತ್ ಆಗಿದ್ದಾಳೆ, ಅದಕ್ಕೆ ಹಾಗೆ ಅಂದೆ ಅದರಲ್ಲಿ ಏನಿದೆ ಎಂದು ಪ್ರತಿಯುತ್ತರ ನೀಡಿದ್ದಾರೆ. ಅದಕ್ಕೆ ಪತ್ನಿ ನಗುತ್ತಲೇ ರಜತ್‌ಗೆ ಪೆಟ್ಟು ಕೊಡಲು ಮುಂದಾಗಿದ್ದಾರೆ.
ಇದಾದ ಕೆಲವು ನಿಮಿಷಕ್ಕೆ ಬಿಗ್ ಬಾಸ್ ಮನೆಗೆ ರಜತ್ ಅವರ ಇಬ್ಬರು ಮಕ್ಕಳು ಎಂಟ್ರಿ ಕೊಟ್ಟಿದ್ದಾರೆ. ಇಬ್ಬರು ಮಕ್ಕಳನ್ನು ನೋಡುತ್ತಿದ್ದಂತೆ ರಜತ್ ಕಣ್ಣಲ್ಲಿ ನೀರು ಬಂದಿದೆ. ಅಪ್ಪ ಮಾತಾಡಿ ಅಪ್ಪ ಅಂತ ಮಗಳು ರಜತ್‌ರನ್ನು ಅಪ್ಪಿಕೊಂಡಿದ್ದಾರೆ. ಇದನ್ನೂ ನೋಡಿದ ಮನೆ ಮಂದಿ ಭಾವುಕರಾಗಿದ್ದಾರೆ.