Select Your Language

Notifications

webdunia
webdunia
webdunia
webdunia

BigBoss Season11: ಟಾಸ್ಕ್ ವಿಚಾರಕ್ಕೆ ಕೈ ಕೈ ಮಿಲಾಯಿಸಲು ಮುಂದಾದ ರಜತ್-ಉಗ್ರಂ ಮಂಜು

BigBoss Season 11, Wild Card Contest Rajath Kishan, Ugram Manju

Sampriya

ಬೆಂಗಳೂರು , ಮಂಗಳವಾರ, 17 ಡಿಸೆಂಬರ್ 2024 (19:05 IST)
Photo Courtesy X
ಬೆಂಗಳೂರು: ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಿಗ್‌ಬಾಸ್ ಮನೆಗೆ ಎಂಟ್ರಿಕೊಟ್ಟ ರಜತ್ ಕಿಶನ್ ಅವರು ತಮ್ಮ ಮಾತಿನಿಂದ ಈಗಾಗಲೇ ಸಹಸ್ಪರ್ಧಿಗಳಿಗೆ ಟಾಂಗ್ ನೀಡುತ್ತಿದ್ದಾರೆ. ಇದೀಗ ಇಂದಿನ ಎಪಿಸೋಡ್‌ನಲ್ಲಿ ರಜತ್ ಹಾಗೂ ಉಗ್ರಂ ಮಂಜು ನಡುವೆ ಗಲಾಟೆ ಜೋರಾಗಿದೆ.

ಚೆಂಡು ಸಾಗಲಿ ಮುಂದೆ ಹೋಗಲಿ ಎನ್ನುವ ಟಾಸ್ಕ್‌ನಲ್ಲಿ ಒಂದು ತಂಡದ ಉಸ್ತುವಾರಿಯನ್ನು ಚೈತ್ರಾ ಕುಂದಾಪುರ ಅವರು ವಹಿಸಿಕೊಂಡಿದ್ದರು.  ಈ ವೇಳೆ, ಚೈತ್ರಾ ಹಾಗೂ ರಜತ್ ನಡುವೆ ಮಾತಿನ ಚಕಮಕಿ ನಡೆದಿದೆ. ಟಿವಿಯಲ್ಲಿ ಗೇಮ್ ನೋಡಿಕೊಂಡು ಬಂದವರ ಕಥೆ ಇದೆ ಎಂದು ರಜತ್ ಬಗ್ಗೆ ಮಂಜು ಕೆಂಡಕಾರಿದ್ದಾರೆ. ಆಗ ಯೋಗ್ಯತೆಯ ಮಾತುಗಳು ಬಂದಿವೆ. ಮಂಜು ಅವರು ರಜತ್ ಅವರ ಮೈ ಮೇಲೆ ಹೋಗಿದ್ದಾರೆ.

ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದ ಪ್ರೋಮೋದಲ್ಲಿ ರಜತ್ ಹಾಗೂ ಉಗ್ರಂ ಮಂಜು ನಡುವೆ ಮಾತಿನ ಚಕಮಕಿ ಜೋರಾಗಿ ನಡೆದಿದೆ.

ಕಳೆದ ವಾರ ಧನರಾಜ್ ನಡುವೆ ರಜತ್ ಮಾಡಿದ ಗಲಾಟೆ ವಿಚಾರವಾಗಿ ಕಿಚ್ಚ ಸುದೀಪ್ ಅವರು ಈಗಾಗಲೇ ಖಡಕ್ ವಾರ್ನಿಂಗ್ ನೀಡಿ, ಶಿಕ್ಷೆ ನೀಡಿದ್ದರು. ಆದರೂ ಇದೀಗ ಮತ್ತೆ ಮಂಜು ಹಾಗೂ ರಜತ್ ಅವರ ನಡುವೆ ಮಾರಾಮಾರಿಯಾಗಿದೆ. ಹಾಗಾದ್ರೆ ಈ ವಾರಾಂತ್ಯವು ಕೂಡ ರಜತ್‌ಗೆ ಸುದೀಪ್ ಬೆಂಡೆತ್ತುತ್ತಾರಾ? ಕಾದುನೋಡಬೇಕಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಪತ್ರೆಯಿಂದ ಬಂದ್ಮೇಲೆ ದರ್ಶನ್‌ರನ್ನು ಭೇಟಿಯಾಗುತ್ತೇನೆ: ಶ್ರೀಮುರಳಿ