Select Your Language

Notifications

webdunia
webdunia
webdunia
webdunia

ಆಸ್ಪತ್ರೆಯಿಂದ ಬಂದ್ಮೇಲೆ ದರ್ಶನ್‌ರನ್ನು ಭೇಟಿಯಾಗುತ್ತೇನೆ: ಶ್ರೀಮುರಳಿ

Actor Darshan Thoogudeep, Actor Srimurali, Darshana Discharged

Sampriya

ಬೆಂಗಳೂರು , ಮಂಗಳವಾರ, 17 ಡಿಸೆಂಬರ್ 2024 (17:52 IST)
Photo Courtesy X
ಬೆಂಗಳೂರು: ಕೊಲೆ ಪ್ರಕರಣದಲ್ಲಿ  ನಟ ದರ್ಶನ್‌ಗೆ ಜಾಮೀನು ಸಿಕ್ಕಿರುವುದರ ಬಗ್ಗೆ ರೋರಿಂಗ್ ಸ್ಟಾರ್ ಶ್ರೀಮುರಳಿ ಪ್ರತಿಕ್ರಿಯಿಸಿ, ಕೆಟ್ಟದ್ದು ಬರೋದೇ ಒಳ್ಳೆಯ ದಾರಿಗೆ ಕರೆದುಕೊಂಡು ಹೋಗೋಕೆ ಎಂದಿದ್ದಾರೆ.

ಈ ಹಿಂದೆಯೂ ದರ್ಶನ್‌ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದ ಶ್ರೀಮುರಳಿ, ಕಾಲಾಯ ತಸ್ಮೈ ನಮಃ ಎಂದಿದ್ದಾರೆ.

ಇದೀಗ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್‌ಗೆ ಜಾಮೀನು ಸಿಕ್ಕಿರುವುದರಿಂದ ಬಹುಶಃ ಏನೇ ನೋವಾಗಿದ್ರೂ ಇವತ್ತು ಎಲ್ಲರಿಗೂ ನೆಮ್ಮದಿ ಹಾಗೂ ಸಮಾಧಾನ ಸಿಕ್ಕಿದೆ ಎಂದರು.

ಕೆಟ್ಟ ದಿನಗಳು ಬರುವುದೇ ಒಳ್ಳೆಯ ದಾರಿಗೆ ಕರೆದುಕೊಂಡು ಹೋಗಲು, ಜತೆಗೆ ಒಳ್ಳೆಯ ದಿನಗಳನ್ನು ತೋರಿಸೋಕೆ ಎಂದಿದ್ದಾರೆ. ಬಹುಶಃ ಏನೇ ನೋವಾಗಿದ್ರೂ ಇವತ್ತು ಎಲ್ಲರಿಗೂ ನೆಮ್ಮದಿ ಹಾಗೂ ಸಮಾಧಾನ ಸಿಕ್ಕಿದೆ. ಎಲ್ಲಾ ಕಡೆ ಹೇಳಿದ್ದೀನಿ, ಮತ್ತೊಮ್ಮೆ ಹೇಳ್ತಿದ್ದೀನಿ ಕಾಲಾಯ ತಸ್ಮೈ ನಮಃ ಎಲ್ಲವನ್ನೂ ದೇವರು ನೋಡಿಕೊಳ್ಳುತ್ತಾನೆ.

ದರ್ಶನ್ ಅವರಿಗೆ ಚಿಕಿತ್ಸೆ ನಡೆಯುತ್ತಿದೆ. ಅವರು ಆಸ್ಪತ್ರೆಯಿಂದ ಬಂದ್ಮೇಲೆ ಭೇಟಿ ಮಾಡುತ್ತೇನೆ ಎಂದು ಶ್ರೀಮುರಳಿ ಮಾತನಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶೂಟಿಂಗ್‌ ವೇಳೆ ಪ್ರಭಾಸ್‌ಗೆ ಪೆಟ್ಟು, ಜಪಾನ್‌ನಲ್ಲಿ ಕಲ್ಕಿ ಪ್ರೀಮಿಯರ್‌ ಶೋಗೆ ಗೈರು