Select Your Language

Notifications

webdunia
webdunia
webdunia
webdunia

ಮೋಕ್ಷಿತಾ ನಾಮಿನೇಷನ್ ಕಾರಣಕ್ಕೆ ಕೆಂಡಮಂಡಲವಾದ ಉಗ್ರಂ ಮಂಜು

BigBoss Season 11, Ugram Manju, Actress Mokshita Pai

Sampriya

ಬಿಡದಿ , ಗುರುವಾರ, 26 ಡಿಸೆಂಬರ್ 2024 (17:06 IST)
Photo Courtesy X
ರೆಸಾರ್ಟ್ ಆಗಿ ಕನ್ವರ್ಟ್ ಆಗಿದ್ದ ಬೆಗ್‌ಬಾಸ್‌ ಮನೆಯಲ್ಲಿ ಇದೀಗ ನಾಮಿನೇಷನ್ ಕಿಡಿ ಹೊತ್ತುಕೊಂಡಿದೆ. ಪ್ರತಿವಾರದಂತೆ ಈ ವಾರವೂ ಬಿಗ್‌ಬಾಸ್ ಟೀಂ ವಿಭಿನ್ನವಾಗಿ ನೇರವಾಗಿ ನಾಮಿನೇಷನ್ ಟಾಸ್ಕ್ ನೀಡಿದೆ.  ಈ ಬಾರಿ ಬಾಟಲಿ ತೆಗೆದು ನಾಮಿನೇಟ್ ಮಾಡಲು ಬಯಸುವ ವ್ಯಕ್ತಿಯ ತಲೆಗೆ ಬಾಟಲಿಯಿಂದ ಹೊಡೆದು ನಾಮಿನೇಷನ್ ಮಾಡಲು ಕಾರಣ ಕೊಡಬೇಕಿತ್ತು.

ಇನ್ನೂ ಮೋಕ್ಷಿತಾ ಅವರು ಮಂಜು ತಲೆಗೆ ಹೊಡೆದು ನಾಮಿನೇಟ್ ಮಾಡಿದ್ದಾರೆ.  ಇನ್ನೂ ಭವ್ಯಾ ಅವರು, ಐಶ್ವರ್ಯಾ ತಲೆಗೆ ಬಾಟಲಿಯಲ್ಲಿ ಹೊಡೆದಿದ್ದಾರೆ. ಬಳಿಕ ಮೋಕ್ಷಿತಾ ಉಗ್ರಂ ಮಂಜು ತಲೆಗೆ ಬಾಟಲಿಯಿಂದ ಹೊಡೆದಿದ್ದಾರೆ. ಈ ವೇಳೆ, ಇಬ್ಬರ ನಡುವೆ ವಾಕ್ಸಮರ ನಡೆದಿದೆ.

ಮೋಕ್ಷಿತಾ ಅವರು ಮಂಜುಗೆ ಈಚೆಗೆ ನೀವು ಮನೆಯಲ್ಲಿ ಕಾಣಿಸಿಕೊಂಡಿಲ್ಲ ಎಂದು ಕಾರಣ ನೀಡಿದ್ದಾರೆ. ಇದಕ್ಕೆ ರೊಚ್ಚಿಗೇಳುವ ಮಂಜು, ನಾಳೆಯಿಂದ ಈ ಮನೆಯಲ್ಲಿ ಹೇಗೆ ಕಾಣಿಸಿಕೊಳ್ಳಬೇಕು ಎಂದು ನಿಮ್ಮ ಬಳಿ ಟ್ಯೂಷನ್‌ಗೆ ಬರುತ್ತೇನೆ ಎಂದಿದ್ದಾರೆ. ನಿಮಗೆ ನಾನು ಕಾಣಿಸಿಕೊಳ್ಳಲು ಏನಾದರೂ ತಂದುಕೊಡಬೇಕಾ ಎಂದು ಮೋಕ್ಷಿತಾ ಮೇಲೆ ಕೆಂಡ ಕಾರಿದ್ದಾರೆ.

ಆಗ ಕೆರಳಿದ ಮೋಕ್ಷಿತಾ, ನನಗೆ ಅನಿಸಿದ್ದನ್ನು ನಾನು ಹೇಳಿದ್ದೀನಿ. ನೀವು ಯಾರು ನನಗೆ ವೈಸ್ ರೈಸ್ ಮಾಡೋಕೆ ಎಂದು ತಿರುಗೇಟು ನೀಡಿದ್ದಾರೆ. ಕ್ಷುಲ್ಲಕ ಕಾರಣಗಳಿಗೆ ನಾನು ನಾಮಿನೇಟ್ ಆಗಲ್ಲ ಎಂದ ಮಂಜುಗೆ, ನಿಮ್ಮನ್ನು ನಾಮಿನೇಟ್ ಮಾಡೋದು ನನ್ನಿಷ್ಟ. ಇದು  ನನ್ನ ನಿರ್ಧಾರ ಎಂದು ಬಾಟಲಿಯಿಂದ ಮಂಜು ತಲೆಗೆ ಮೋಕ್ಷಿತಾ ಹೊಡೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪುಪ್ಪ 2 ಕಾಲ್ತುಳಿತ ಬೆನ್ನಲ್ಲೇ ಸಿಎಂ ರೇವಂತ್ ರೆಡ್ಡಿ ಭೇಟಿಯಾದ ತೆಲುಗು ಚಿತ್ರರಂಗ