ತೆಲಂಗಾಣ: ಪುಪ್ಪ 2 ಮೊದಲ ಪ್ರದರ್ಶನದ ವೇಳೆ ಸಂಭವಿಸಿದ ಕಾಲ್ತುಳಿತದ ಬೆನ್ನಲ್ಲೇ ತೆಲುಗು ಚಿತ್ರರಂಗದ ಪ್ರಮುಖರು ಸಿಎಂ ರೇವಂತ್ ರೆಡ್ಡಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
 
									
			
			 
 			
 
 			
					
			        							
								
																	ಗುರುವಾರ (ಡಿಸೆಂಬರ್ 26, 2024) ಬೆಳಗ್ಗೆ ಹೈದರಾಬಾದ್‌ನಲ್ಲಿರುವ ಇಂಟಿಗ್ರೇಟೆಡ್ ಕಮಾಂಡ್ ಕಂಟ್ರೋಲ್ ಸೆಂಟರ್‌ನಲ್ಲಿ (ಐಸಿಸಿಸಿ) ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರೊಂದಿಗೆ ತೆಲಂಗಾಣ ರಾಜ್ಯ ಚಲನಚಿತ್ರ ಅಭಿವೃದ್ಧು ನಿಗಮ ಸಭೆ ನಡೆಸಿದೆ.  ಈ ವೇಳೆ ಅಲ್ಲು ಅರ್ಜುನ್ ತಂದೆ, ನಿರ್ಮಾಪಕ ಅಲ್ಲು ಅರವಿಂದ್ ಕೂಡಾ ಭಾಗಿಯಾದರು.
									
										
								
																	ತೆಲಂಗಾಣ ಚಲನಚಿತ್ರ ಅಭಿವೃದ್ಧಿ ನಿಗಮದ (ಟಿಜಿಎಫ್‌ಡಿಸಿ) ಅಧ್ಯಕ್ಷ ವಿ. ವೆಂಕಟ ರಮಣ ರೆಡ್ಡಿ (ದಿಲ್ ರಾಜು) ಅವರು ಮುಂದಿನ ದಿನಗಳಲ್ಲಿ ಆರೋಗ್ಯಕರ ವಾತಾವರಣವನ್ನು ಹೇಗೆ ಹೊಂದುವುದು ಎಂಬುದರ ಬಗ್ಗೆ ಮಾತನಾಡಿದರು.
									
											
							                     
							
							
			        							
								
																	ಉಪಮುಖ್ಯಮಂತ್ರಿ ಭಟ್ಟಿ ವಿಕ್ರಮಾರ್ಕ ಮಲ್ಲು, ಛಾಯಾಗ್ರಹಣ ಸಚಿವ ಕೋಮಟಿರೆಡ್ಡಿ ವೆಂಕಟ್ ರೆಡ್ಡಿ, ಡಿಜಿಪಿ ಜಿತೇಂದರ್ ಮತ್ತು ರಾಜ್ಯ ಆಡಳಿತದ ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಾಗಿದ್ದಾರೆ.
									
			                     
							
							
			        							
								
																	ನಟರಾದ ಅಕ್ಕಿನೇನಿ ನಾಗಾರ್ಜುನ, ದಗ್ಗುಬಾಟಿ ವೆಂಕಟೇಶ್, ಸಿದ್ದು ಜೊನ್ನಲಗಡ್ಡ, ಕಿರಣ್ ಅಬ್ಬಾವರಂ; ನಿರ್ಮಾಪಕರು ಅಲ್ಲು ಅರವಿಂದ್, ದಗ್ಗುಬಾಟಿ ಸುರೇಶ್ ಬಾಬು; ನಿರ್ದೇಶಕರಾದ ಕೆ ರಾಘವೇಂದ್ರ ರಾವ್, ತ್ರಿವಿಕ್ರಮ್, ಬೋಯಪತಿ ಶ್ರೀನು, ವಂಶಿ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.