Select Your Language

Notifications

webdunia
webdunia
webdunia
webdunia

ಸರಿಗಮಪ ಜ್ಯೂರಿ, ರಿದಂ ಕಿಂಗ್ ಎಂದೇ ಖ್ಯಾತರಾದ ಎಸ್‌ ಬಾಲಿ ಇನ್ನಿಲ್ಲ

ಸರಿಗಮಪ ಜ್ಯೂರಿ, ರಿದಂ ಕಿಂಗ್ ಎಂದೇ ಖ್ಯಾತರಾದ ಎಸ್‌ ಬಾಲಿ ಇನ್ನಿಲ್ಲ

Sampriya

ಬೆಂಗಳೂರು , ಗುರುವಾರ, 2 ಜನವರಿ 2025 (16:59 IST)
Photo Courtesy X
ಜೀ ಕನ್ನಡದ ಸರಿಗಮಪ ರಿಯಾಲಿಟಿ ಶೋನಲ್ಲಿ ಜ್ಯೂರಿಯಾಗಿದ್ದ, ಬಹುವಾದ್ಯ ಪರಿಣಿತರಾಗಿ ಬಾಲಿ ಎಂದೇ ಗುರುತಿಸಿಕೊಂಡಿದ್ದ ಎಸ್ ಬಾಲಸುಬ್ರಹ್ಮಣ್ಯಂ ಅವರು ಇಂದು ನಿಧನರಾಗಿದ್ದಾರೆ. ಮೃದಂಗ, ತಬಲಾ ಸೇರಿದಂತೆ ಹತ್ತು ಹಲವು ಲಯವಾದ್ಯಗಳ ನುಡಿಸಿ ರಿದಂ ಕಿಂಗ್ ಎಂದೇ ಹೆಸರು ಗಳಿಸಿದ್ದರು.

 ಸುಗಮ ಸಂಗೀತದಲ್ಲೂ ಇವರು ಮಾಸ್ಟರ್‌, ದಕ್ಷಿಣ ಭಾರತದ ಏಕೈಕ ರಿದಂ ಕಂಪೋಸರ್‌, ಆಯೋಜಕರು ಮತ್ತು ನಿರ್ದೇಶಕರು ಎಂಬ ಹೆಗ್ಗಳಿಗೆ ಇವರದು.

ತಂದೆ ಬಯಾಲಜಿ ಸುಂದರೇಶನ್ ಎಂದೇ ಖ್ಯಾತರಾಗಿದ್ದ ಎಂ.ವಿ. ಸುಂದರೇಶನ್ ಮತ್ತು ಸಾವಿತ್ರಿ ದಂಪತಿಯ ಮಗನಾಗಿ  1953ರ ಜನವರಿ 9ರಂದು ಬೆಂಗಳೂರಿನಲ್ಲಿ ಬಾಲಿ ಅವರು ಜನಿಸಿದರು. ಚಿಕ್ಕಂದಿನಿಂದಲೇ ಸಂಗೀತ ಕ್ಷೇತ್ರದ ಬಗ್ಗೆ ಒಲವಿದ್ದ ಬಾಲಿ ಅವರು ಪಾಲಕ್ಕಾಡು ಶ್ರೀ ರವೀಂದ್ರನಾಥ ವಾರಿಯರ್ ಬಳಿ ಮೃದಂಗ ಕಲಿತರು. ಮುಂದೆ ಅವರು ಹಲವಾರು ಶಾಸ್ತ್ರೀಯ ಸಂಗೀತಗಾರರಿಗೆ ಮೃದಂಗ ಪಕ್ಕವಾದ್ಯ ಸಹಕಾರದಲ್ಲಿ  ಬಾಗಿಯಾಗಿದ್ದಾರೆ.

ಶಾಸ್ತ್ರೀಯವಾಗಿ ಮೃದಂಗ ಕಲಿತಿದ್ದ ಬಾಲಿ ಅವರು ತಮ್ಮ ಶ್ರದ್ಧೆಯಿಂದ ತಬಲ, ಢೋಲಕ್, ಢೋಲ್ಕಿ, ಖೋಲ್, ಖಂಜಿರ ಮುಂತಾದ ಹಲವಾರು ವಾದ್ಯಗಳನ್ನು ನುಡಿಸುವ ಪರಿಣತಿಯನ್ನು ಸಾಧಿಸಿದರು. ಹೀಗೆ ಸಕಲ ಲಯ ವಾದ್ಯಗಳ ನುಡಿಸುವಿಕೆಯಲ್ಲಿ ಪರಿಣತಿ ಪಡೆದ ಅಪರೂಪದ ಲಯವಾದ್ಯಗಾರ ಇಂದು ಅಗಲಿದ್ದಾರೆ.

ಅವರಿಗ ರಾಜ್ಯ ಸಂಗೀತ ನೃತ್ಯ ಅಕಾಡೆಮಿ ಗೌರವ, ಕರ್ನಾಟಕ ಕಲಾಶ್ರೀ ಪ್ರಶಸ್ತಿ  ಸೇರಿದಂತೆ ಅನೇಕ ಪ್ರಶಸ್ತಿಗಳು ಸಂದಿವೆ. ಇವರು ಹಲವು ವರ್ಷಗಳಿಂದ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ಶೋನಲ್ಲು ಜ್ಯೂಲಿ ಪಾನೆಲ್‌ನಲ್ಲಿ ಆಕ್ಟೀವ್ ಆಗಿ ಕಾಣಿಸಿಕೊಳ್ಳುತ್ತಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಗೇ ಕೌಂಟರ್ ಕೊಡಲು ಬಂದ ಕಿಚ್ಚ ಸುದೀಪ್