ಬೆಂಗಳೂರು: ನವನೀತ್ ನಿರ್ದೇಶನದ ಮತ್ತು ಶರಣ್ ನಾಯಕರಾಗಿ ನಟಿಸಿರುವ ಛೂ ಮಂತರ್ ಚಿತ್ರದ ಟ್ರೇಲರ್ ಈಚೆಗೆ ಬಿಡುಗಡೆಗೊಂಡಿದೆ. ತರುಣ್ ಸ್ಟುಡಿಯೋಸ್ ನಿರ್ಮಾಣದ ಈ ಚಿತ್ರ ಜ.10ಕ್ಕೆ ತೆರೆಗೆ ಬರಲಿದೆ.
ಮೂರು ದಿನಗಳ ಹಿಂದೆ ಬಿಡುಗಡೆಯಾದ ಈ ಟ್ರೈಲರ್ ಅನ್ನು 14 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದು, ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಸಿನಿಮಾದಲ್ಲಿ ಶರಣ್ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಸಾಕಷ್ಟು ಸಸ್ಪೆನ್ಸ್ ಮತ್ತು ಥ್ರಿಲ್ಲರ್ ದೃಶ್ಯಗಳಿವೆ.
ಚಿಕ್ಕಣ್ಣ, ಮೇಘನಾ ಗಾಂವ್ಕರ್, ಅದಿತಿ ಪ್ರಭುದೇವ, ಪ್ರಭು ಮುಂಡ್ಕರ್ ಮುಂತಾದವರು ಚಿತ್ರದಲ್ಲಿದ್ದಾರೆ. ಅನೂಪ್ ಕಟ್ಟುಕರನ್ ಛಾಯಾಚಿತ್ರಗ್ರಹಣ, ಚಂದನ್ ಶೆಟ್ಟಿ ಸಂಗೀತ ನಿರ್ದೇಶನವಿರುವ ಚಿತ್ರಕ್ಕೆ ಅವಿನಾಶ್ ಬಸುತ್ಕರ್ ಹಿನ್ನೆಲೆ ಸಂಗೀತ ನೀಡಿದ್ದಾರೆ.
ಸಂಕ್ರಾಂತಿ ಸಮಯದಲ್ಲಿ ಬೇರೆ ಭಾಷೆಗಳ ದೊಡ್ಡ ಚಿತ್ರಗಳು ಬಿಡುಗಡೆಯಾಗುವುದರಿಂದ ಕನ್ನಡದ ಚಿತ್ರಗಳನ್ನು ಆ ಸಮಯದಲ್ಲಿ ಹೆಚ್ಚಾಗಿ ಬಿಡುಗಡೆ ಮಾಡುವುದಿಲ್ಲ. ನಮ್ಮ ಚಿತ್ರದ ಕಂಟೆಂಟ್ ಚೆನ್ನಾಗಿದೆ. ಜನರಿಗೆ ಬೇಕಾದ ಎಲ್ಲಾ ಅಂಶಗಳು ಚಿತ್ರದಲ್ಲಿದೆ. ಹೀಗಾಗಿ ಸಂಕ್ರಾಂತಿ ಸಮಯದಲ್ಲೇ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ ಎಂದು ನಿರ್ಮಾಪಕ ತರಣ್ ಶಿವಪ್ಪ ತಹೇಳಿದ್ದಾರೆ.