Select Your Language

Notifications

webdunia
webdunia
webdunia
webdunia

ಕುಟುಂಬದ ಜತೆ ಹೊಸ ವರ್ಷವನ್ನು ಬರಮಾಡಿಕೊಂಡ ನಟ ಯಶ್‌

2025 New Year Celebration, Actor Yash New Year Celebration, Toxic Movie

Sampriya

ಬೆಂಗಳೂರು , ಬುಧವಾರ, 1 ಜನವರಿ 2025 (16:29 IST)
Photo Courtesy X
ಟಾಕ್ಸಿಕ್ ಸಿನಿಮಾದ ಶೂಟಿಂಗ್‌ಗೆ ಬ್ರೇಕ್ ಕೊಟ್ಟು ನಟ ಯಶ್‌ ತಮ್ಮ ಕುಟುಂಬದ ಜತೆ ಹೊಸ ವರ್ಷವನ್ನು ಬರಮಾಡಿಕೊಂಡರು. 'ಕೆಜಿಎಫ್' ಸ್ಟಾರ್ ಯಶ್ ಫ್ಯಾಮಿಲಿ ಜೊತೆಗಿನ ಸುಂದರ ಫೋಟೋಗಳನ್ನು ನಟ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ನಮ್ಮ ಪುಟ್ಟ ಕುಟುಂಬದ ಕಡೆಯಿಂದ ಹೊಸ ವರ್ಷಕ್ಕೆ ಶುಭಾಶಯಗಳು. ನಿಮ್ಮೆಲ್ಲರಿಗೂ ಸಂತೋಷ, ಪ್ರೀತಿ ಮತ್ತು ನಗು ತುಂಬಿರಲಿ ಎಂದು ಹಾರೈಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ನಮ್ಮ ಕಡೆಯಿಂದ ನಿಮಗೆ ಹೊಸ ವರ್ಷದ ಶುಭಾಶಯಗಳು ಎಂದು ಯಶ್ ದಂಪತಿ ಫ್ಯಾನ್ಸ್‌ಗೆ ವಿಶ್ ಮಾಡಿದ್ದಾರೆ. ಯಶ್ ಕುಟುಂಬದ ಹ್ಯಾಪಿ ಮೂಮೆಂಟ್ ನೋಡಿ ಫ್ಯಾನ್ಸ್ ಕೂಡ ಖುಷಿಪಟ್ಟಿದ್ದಾರೆ.

ಕೆಜಿಎಫ್‌ 2 ಸಕ್ಸಸ್ ಬಳಿಕ ನಟ ಯಶ್‌ಗೆ ಬಾಲಿವುಡ್‌ನಲ್ಲಿ ಬೇಡಿಕೆ ಹೆಚ್ಚಾಗಿದೆ. ಸದ್ಯ ಯಶ್‌ ಅವರು ಟಾಕ್ಸಿಕ್‌ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿರುವ ಯಶ್ ಅವರಿಗೆ ಬಾಲಿವುಡ್‌ನಲ್ಲಿ ರಾಮಾಯಣ ಸಿನಿಮಾದಲ್ಲಿ ರಾವಣನಾಗಿ ಅಭಿನಯಿಸಲಿದ್ದಾರೆ.  ಜೊತೆಗೆ ರಾಮನ ಪಾತ್ರಧಾರಿ ರಣ್‌ಬೀರ್‌ ಕಪೂರ್‌ ಮುಂದೆ ರಾವಣನಾಗಿ ಯಶ್‌ ಅಬ್ಬರಿಸಲಿದ್ದಾರೆ.

ಅದಲ್ಲದೆ ಈ ಸಿನಿಮಾಗೆ ಬಂಡವಾಳವನ್ನು ಹೂಡುತ್ತಿದ್ದಾರೆ.  ಈ ಚಿತ್ರವನ್ನು ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್‌ ನಿರ್ದೇಶನ ಮಾಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನ್ಯೂ ಇಯರ್‌ಗೆ ಹೊಸ ಚಿತ್ರ ಘೋಷಿಸಿದ ಕಿಚ್ಚ: ನಾಯಕನಾಗಿ ಸುದೀಪ್‌ ಅಳಿಯ ಎಂಟ್ರಿ