Select Your Language

Notifications

webdunia
webdunia
webdunia
webdunia

ಆರ್‌ ಅಶೋಕ್‌ಗೆ ಮದುವೆ ಆಮಂತ್ರಣ ನೀಡಿದ ಡಾಲಿ ಧನಂಜಯ್

Actor Dolly Dhanunjay, Marriage Invitation, Opposition Leader R Ashok

Sampriya

ಬೆಂಗಳೂರು , ಬುಧವಾರ, 1 ಜನವರಿ 2025 (18:39 IST)
Photo Courtesy X
ಬೆಂಗಳೂರು: ಫೆ.16ಕ್ಕೆ ಗೆಳತಿ ಡಾ.ಧನ್ಯತಾ ಅವರನ್ನು ಕೈ ಹಿಡಿಯಲಿರುವ ನಟ ಡಾಲಿ ಧನಂಜಯ್ ಅವರು ಇದೀಗ ಗಣ್ಯರಿಗೆ ಆಮಂತ್ರಣ ಪತ್ರಿಕೆ ನೀಡುವುದರಲ್ಲಿ ಬ್ಯುಸಿಯಾಗಿದ್ದಾರೆ.

ಈಗಾಗಲೇ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್‌,  ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸೇರಿದಂತೆ ಅನೇಕ ರಾಜಕೀಯ ಗಣ್ಯರನ್ನು ಧನಂಜಯ್ ಅವರು ಮದುವೆಗೆ ಆಹ್ವಾನಿಸಿದ್ದಾರೆ.

ಇಂದು ವಿರೋಧ ಪಕ್ಷದ ನಾಯಕ ಆರ್‌ ಅಶೋಕ್ ಅವರನ್ನು ಭೇಟಿಯಾಗಿ ಮದುವೆಗೆ ಡಾಲಿ ಧನಂಜಯ್ ಆಹ್ವಾನಿಸಿದ್ದಾರೆ.

ಈ ಫೋಟೋಗಳನ್ನು ಆರ್‌ ಅಶೋಕ್ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದಾರೆ.  

ಕನ್ನಡ ಚಿತ್ರರಂಗದ ಪ್ರತಿಭಾವಂತ ಕಲಾವಿದ ಧನಂಜಯ್ ಅವರು ಇಂದು ತಮ್ಮ ವಿವಾಹ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಿದರು. ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ಡಾಲಿ ಅವರಿಗೆ ಶುಭ ಹಾರೈಸಿ, ಅವರ ಮುಂದಿನ ಭವಿಷ್ಯ ಉಜ್ವಲವಾಗಲೆಂದು ಶುಭ ಹಾರೈಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೊಸ ವರ್ಷಕ್ಕೆ ಎರಡನೇ ಮಗುವಿನ ಆಗಮನದ ಸುಳಿವು ಕೊಟ್ಟ ಇಲಿಯಾನಾ