ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಅಭಿನಯ ಚಕ್ರವರ್ತಿ ಎಂದೇ ಬಿರುದು ಪಡೆದುಕೊಂಡಿರುವ ಕಿಚ್ಚ ಸುದೀಪ್ ಮಗಳು ಸಾನ್ವಿ ಕನ್ನಡ ಬರಲ್ವಾ ಎಂದು ನೆಟ್ಟಿಗರಿಂದ ಟ್ರೋಲ್ ಗೊಳಗಾಗಿದ್ದಾರೆ.
ಕಿಚ್ಚ ಸುದೀಪ್ ತಮ್ಮ ಪತ್ನಿ ಪ್ರಿಯಾ, ಮಗಳು ಸಾನ್ವಿ ಜೊತೆ ಈ ವಾರ ಜೀ ಕನ್ನಡದ ಸರಿಗಮಪ ಶೋನಲ್ಲಿ ಭಾಗಿಯಾಗಿದ್ದಾರೆ. ಅಪ್ಪನಿಗಾಗಿ ಜಸ್ಟ್ ಮಾತ್ ಮಾತಲ್ಲಿ ಹಾಡು ಹಾಡುತ್ತಾ ಸಾನ್ವಿ ಸರ್ಪೈಸ್ ಕೊಡುತ್ತಾರೆ. ಸಾನ್ವಿ ವೇದಿಕೆಗೆ ಬಂದಾಗ ಅವರನ್ನು ಆಂಕರ್ ಅನುಶ್ರೀ ಮಾತನಾಡಿಸುತ್ತಾರೆ.
ಇಡೀ ಕಿಚ್ಚನ ಕುಟುಂಬವನ್ನೇ ವೇದಿಕೆ ಕರೆದು ಮಾತನಾಡಿಸಲಾಗುತ್ತದೆ. ಈ ವೇಳೆ ಸಾನ್ವಿ ಇಂಗ್ಲಿಷ್ ನಲ್ಲೇ ಮಾತನಾಡುತ್ತಾರೆ. ಈ ಪ್ರೋಮೋ ನೋಡಿದ ನೆಟ್ಟಿಗರು ಸಾನ್ವಿಗೆ ಕನ್ನಡ ಬರಲ್ವಾ ಎಂದು ಟ್ರೋಲ್ ಮಾಡಿದ್ದಾರೆ.
ಕನ್ನಡದಲ್ಲಿ ಮಾತಾಡಮ್ಮಾ ತಾಯಿ. ಕನ್ನಡದ ಅಷ್ಟು ದೊಡ್ಡ ನಟನ ಮಗಳು ನೀನು. ಕನ್ನಡ ಮಾತನಾಡೋದೇ ಕೇಳಲ್ಲಾ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಸಾನ್ವಿ ಗಾಯಕಿ ಕೂಡಾ. ಆದರೆ ಅವರು ಇದುವರೆಗೆ ಹಾಡಿರುವುದೂ ಪಾಶ್ಚಿಮಾತ್ಯ ಶೈಲಿಯ ಹಾಡುಗಳನ್ನೇ ಈ ಕಾರಣಕ್ಕೆ ನೆಟ್ಟಿಗರು ಅವರನ್ನು ಟ್ರೋಲ್ ಮಾಡಿದ್ದಾರೆ.