Select Your Language

Notifications

webdunia
webdunia
webdunia
webdunia

Kannada Cinema Fans War: ನಟ ಸುದೀಪ್ ಏನಂದ್ರು

Kiccha Sudeep, Kannada Cinema Fans War, Darshan Sudeep Fans Fight

Sampriya

ಬೆಂಗಳೂರು , ಮಂಗಳವಾರ, 31 ಡಿಸೆಂಬರ್ 2024 (18:52 IST)
Photo Courtesy X
ಸಿನಿಮಾ ಗೆದ್ದ ಖುಷಿಯಲ್ಲಿರುವ ನಟ ಸುದೀಪ್‌ ಅವರು ಬೆಂಗಳೂರಿನ ನರ್ತಕಿ ಥಿಯೇಟರ್‌ನಲ್ಲಿ ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿದರು. ಈ ವೇಳೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಸುದೀಪ್ ಅವರು ಸ್ಟಾರ್ಸ್ ಫ್ಯಾನ್ಸ್‌ ವಾರ್‌ ಬಗ್ಗೆ ಪ್ರತಿಕ್ರಿಯಿಸಿರುವ ಅವರು ಹೀರೋಗಳು ನನ್ನ ಸಹಕಲಾವಿದರು ಅವರಿಗೆ ಟಾಂಟ್ ಕೊಡೋದು ಮಾಡಬೇಡಿ ಎಂದು ಮನವಿ ಮಾಡಿದರು.

ನಾವು ಹೇಳೋದ್ರಿಂದ ಅವರು ಕೇಳೋ ಹಾಗೆ ಇದಿದ್ರೆ, ವಾರ್ ಅಂತಾ ನೀವೇನು ಹೇಳ್ತಿದ್ದೀರಾ, ಅದು ಯಾರು ಮಾಡ್ತಿದಾರೆ ಅಂತ ಗೊತ್ತಾಗಲ್ಲ. ನಮ್ಮ ಫ್ಯಾನ್ಸ್‌ಗಳು ಮಾಡ್ತಿದ್ದಾರಾ? ಬೇರೆ ಅವರ ಫ್ಯಾನ್ಸ್ ಮಾಡ್ತಿದ್ದಾರೋ ಗೊತ್ತಿಲ್ಲ. ಯಾರ್ ಯಾರೋ ತಂದು ಹಾಕೋಕೆ ಮಾಡಬಹುದು. ಅದು ನಮಗೆ ಗೊತ್ತಾಗಲ್ಲ ಎಂದಿದ್ದಾರೆ.

ಸಿನಿಮಾ ಮಾಡಬೇಕು ಅನ್ನೋದು ಏಕಾಗ್ರತೆ ಇದೆ. ಪ್ರತಿಯೊಬ್ಬ ಕಲಾವಿದರಿಗೂ ಅದೇ ಇರೋದು. ನಾನು ನನ್ನ ಅಭಿಮಾನಿಗಳಿಗೆ ಹೇಳುತ್ತೇನೆ. ಬೇರೇ ಹೀರೋಗಳು ನನ್ನ ಸಹ ಕಲಾವಿದರು ಅವರೆಲ್ಲಾ ಹಾಗಾಗಿ ಅವರ ಬಗ್ಗೆ ಟಾಂಟ್ ಕೊಡೋದು ಮಾಡಬೇಡಿ. ನಮ್ಮ ಸಿನಿಮಾವನ್ನು ಹೊಗಳುವ ಭರದಲ್ಲಿ ಬೇರೇ ಅವರ ಜೊತೆ ಕಂಪೇರ್ ಮಾಡಿ ಮಾತನಾಡೋದು ಬೇಡ ಎಂದು ಫ್ಯಾನ್ಸ್‌ಗೆ ಹೇಳುತ್ತೇನೆ.

ಯಶ್, ದರ್ಶನ್, ಉಪ್ಪಿ ಸರ್, ಶಿವಣ್ಣ ಎಲ್ಲಾ ಸೇರಿದ್ರೆನೆ ಕನ್ನಡ ಚಿತ್ರರಂಗ. ಅದರ ಹೊರತಾಗಿ ನಾವು ಯಾರಿಗೂ ಟಾಂಟ್ ಕೊಡಲ್ಲ, ಯಾಕೆ ಕೊಡಬೇಕು ಎಂದು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಕಿರಿಕ್ ಪಾರ್ಟಿ ಪೋಸ್ಟ್ ನಲ್ಲಿ ರಶ್ಮಿಕಾರನ್ನು ಕೈ ಬಿಟ್ಟು ರಿಷಬ್ ಶೆಟ್ಟಿ ಟಾಂಗ್