Select Your Language

Notifications

webdunia
webdunia
webdunia
webdunia

ಕಿರಿಕ್ ಪಾರ್ಟಿ ಪೋಸ್ಟ್ ನಲ್ಲಿ ರಶ್ಮಿಕಾರನ್ನು ಕೈ ಬಿಟ್ಟು ರಿಷಬ್ ಶೆಟ್ಟಿ ಟಾಂಗ್

Kirik Party Cinema Completed 8 Years, Rashmika Mandanna Cinema Journey, Rishabh Shetty,

Sampriya

ಬೆಂಗಳೂರು , ಮಂಗಳವಾರ, 31 ಡಿಸೆಂಬರ್ 2024 (17:55 IST)
Photo Courtesy X
ಕಿರಿಕ್ ಪಾರ್ಟಿ ನಮ್ಮ ಜೀವನದ ಭಾಗವಾಗಿ 8ವರ್ಷಗಳು ಕಳೆದಿವೆ, ಅನೇಕ ಸುಂದರ ನೆನಪುಗಳು ಮತ್ತು ನಿಮ್ಮ ಪ್ರೀತಿ ಈ ಪಯಣವನ್ನು ಅರ್ಥಪೂರ್ಣವನ್ನಾಗಿಸಿವೆ ಎಂದು ನಿರ್ದೇಶಕ ರಿಷಭ್ ಶೆಟ್ಟಿ ನೆನಪನ್ನು ಹಂಚಿಕೊಂಡಿದ್ದಾರೆ.

ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ರಿಷಬ್ ಶೆಟ್ಟಿ ಕಿರಿಕ್ ಪಾರ್ಟಿ ಸಿನಿಮಾದ ದೃಶ್ಯದ ಫೋಟೋವೊಂದನ್ನು ಹಾಕಿ ಬರೆದುಕೊಂಡಿದ್ದಾರೆ.

ಆದರೆ ಈ ಫೋಟೋದಲ್ಲಿ ಸಿನಿಮಾದ ನಾಯಕಿಯಾದ ರಶ್ಮಿಕಾ ಮಂದಣ್ಣ ಅವರ ಫೋಟೋವಿಲ್ಲ. ಇದನ್ನು ನೋಡಿದ ನೆಟ್ಟಿಗರಲ್ಲಿ ನಾನಾ ಪ್ರಶ್ನೆಗಳು ಹುಟ್ಟಿಕೊಂಡಿದೆ. ರಶ್ಮಿಕಾ ಮಂದಣ್ಣ ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಹೆಸರು ಗಳಿಸಿದ ಬಳಿಕ ಸಿನಿಮಾ ಜರ್ನಿ ಬಗ್ಗೆ ಹೇಳಿಕೊಳ್ಳುವಾಗ ಕಿರಿಕ್ ಪಾರ್ಟಿ ಸಿನಿಮಾದ ಬಗ್ಗೆ ಹೇಳಿಕೊಳ್ಳಲು ಹಿಂಜರಿದಿದ್ದರು. ಪ್ರೊಡಕ್ಷನ್ ಹೌಸ್‌ ಹೇಳಲು ಹಿಂದೇಟು ಹಾಕಿದ್ದರು.

ಇದು ಕನ್ನಡ ಅಭಿಮಾನಿಗಳು ಕೋಪಕ್ಕೂ ಕಾರಣವಾಗಿತ್ತು. ಅದಲ್ಲದೆ ಕನ್ನಡ ಭಾಷೆಯನ್ನು ಮಾತನಾಡಲು ಸಾರ್ವಜನಿಕ ವೇದಿಕೆಯಲ್ಲಿ ಹಿಂಜರಿದಿದ್ದರು.  ಪದೇ ಪದೇ ಕನ್ನಡಿಗರನ್ನು ಕೆಣಕುವ ಕೆಲಸವನ್ನು ಮಾಡಿದ್ದರು.

ಅದಲ್ಲದೆ ರಕ್ಷಿತ್ ಶೆಟ್ಟಿ ಜತೆಗಿನ ನಿಶ್ಚಿತಾರ್ಥ ಮುರಿದು ಬಿದ್ದ ಬಳಿಕ ರಶ್ಮಿಕಾ ಆ ಸಿನಿಮಾದ ಜತೆಗಿನವರೊಂದಿಗೆ ನಂಟನ್ನು ಕಳೆದುಕೊಂಡರು. ಈಗಾಲೂ ಕಿರಿಕ್ ಪಾರ್ಟಿ ಎನ್ನುವ ತಂಡ ಆಗಾಗ ಒಂದಲ್ಲ ಒಂದು ಸಿನಿಮಾ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸುತ್ತಾರೆ. ಆದರೆ ರಶ್ಮಿಕಾ ಇದೀಗ ಬಾಲಿವುಡ್, ಟಾಲಿವುಡ್‌ನಲ್ಲಿ ಬಹು ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ.  

ಇದೀಗ ಈ ಚಿತ್ರತಂಡ ಕಿರಿಕ್ ಪಾರ್ಟಿ ಸಿನಿಮಾ  ಬಗ್ಗೆ ರಿಷಭ್ ಶೆಟ್ಟಿ ಬರೆದುಕೊಂಡಿದ್ದಾರೆ. ಆದರೆ ಆ ಪೋಸ್ಟ್‌ನಲ್ಲಿ ರಶ್ಮಿಕಾ ಮಂದಣ್ಣ ಪೋಟೋ ಇಲ್ಲದಿರುವುದು ನಾನಾ ಕಾರಣಗಳನ್ನು ಹುಟ್ಟು ಹಾಕಿಸುತ್ತಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ದೊಡ್ಮನೆಗೆ ಎಂಟ್ರಿ ಕೊಟ್ರು ರಜತ್ ಫ್ಯಾಮಿಲಿ, ಪತ್ನಿಯಿಂದ ಬುಜ್ಜಿಗೆ ಫುಲ್ ಕ್ಲಾಸ್‌