Select Your Language

Notifications

webdunia
webdunia
webdunia
webdunia

ಮ್ಯಾಕ್ಸ್‌ ಯಶಸ್ವಿ ಪ್ರದರ್ಶನ: ಮೈಸೂರಲ್ಲಿ ಚಾಮುಂಡಿ ದೇವಿಗೆ ಕಿಚ್ಚ ಸುದೀಪ್ ವಿಶೇಷ ಪೂಜೆ

Max Cinema

Sampriya

ಮೈಸೂರು , ಭಾನುವಾರ, 29 ಡಿಸೆಂಬರ್ 2024 (12:09 IST)
Photo Courtesy X
ಮೈಸೂರು: ಈಚೆಗೆ ಬಿಡುಗಡೆಯಾದ ಮ್ಯಾಕ್ಸ್ ಸಿನಿಮಾ ಯಶಸ್ವಿ ಪ್ರದರ್ಶನ ಹಿನ್ನೆಲೆಯಲ್ಲಿ ನಟ ಕಿಚ್ಚ ಸುದೀಪ್ ಭಾನುವಾರ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆದಿದ್ದಾರೆ.


ಬೆಳಗ್ಗೆ ಮೈಸೂರಿಗೆ ಭೇಟಿ ನೀಡಿದ ಅವರು ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನೆಚ್ಚಿನ ನಟ ಬರುವುದನ್ನು ತಿಳಿಯುತ್ತಿದ್ದಂತೆ ಬೆಟ್ಟದಲ್ಲಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು.  

ಕಿಚ್ಚ ಸುದೀಪ್ ನೋಡಿ ಫ್ಯಾನ್ಸ್ ಶಿಳ್ಳೆ ಹೊಡೆದು ಜೈಕಾರ ಕೂಗಿದರು. ಈ ವೇಳೆ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಪೂಜೆ ಬಳಿಕ ಸುದೀಪ್ ಹೊರಬಂದು ನೆರೆದಿದ್ದ ಅಭಿಮಾನಿಗಳತ್ತ ಕೈಬೀಸಿದರು. ನಟನನ್ನು ಕಂಡು ಫ್ಯಾನ್ಸ್ ಸಂತಸ ವ್ಯಕ್ತಪಡಿಸಿದರು.

ವಿಜಯ್‌ ಕಾರ್ತಿಕೇಯ ನಿರ್ದೇಶನದ ಮ್ಯಾಕ್ಸ್ ಸಿನಿಮಾ ಇದೇ ಡಿ.25 ರಂದು ರಾಜ್ಯಾದ್ಯಂತ ತೆರೆ ಕಂಡಿತು. ರಿಲೀಸ್ ಆಗಿ 4 ದಿನವನ್ನು ಪೂರೈಸಿದ್ದು, ಗಲ್ಲಾಪೆಟ್ಟಿಗೆಯಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಿವಣ್ಣ ಮನೆಯ ಮುದ್ದಿನ ನಾಯಿ ನೀಮೋ ನಿಧನ: ಕಂಬನಿ ಮಿಡಿದ ಗೀತಾ ಶಿವರಾಜ್‌ಕುಮಾರ್