Select Your Language

Notifications

webdunia
webdunia
webdunia
webdunia

ಕಿಚ್ಚ- ದಚ್ಚು ಅಭಿಮಾನಿಗಳ ಮಧ್ಯೆ ಬಾಸಿಸಮ್ ವಾರ್‌ ಜೋರಾಗುತ್ತಿದ್ದ ಹಾಗೇ ಕ್ಲಾರಿಟಿ ಕೊಟ್ಟ ಸುದೀಪ್ ಫ್ರೆಂಡ್ ಪ್ರದೀಪ್‌

Max Cinema Review, Darshan Sudeep Fan Fight, Actor Pradeep

Sampriya

ಬೆಂಗಳೂರು , ಗುರುವಾರ, 26 ಡಿಸೆಂಬರ್ 2024 (19:00 IST)
Photo Courtesy X
ಬೆಂಗಳೂರು: ಮಾಕ್ಸ್ ಸಿನಿಮಾಗೆ ಉತ್ತಮ ಪ್ರದರ್ಶನ ಸಿಗುತ್ತಿರುವ ಬೆನ್ನಲ್ಲೇ ನಟ ಪ್ರದೀಪ್ ಅವರು ಕೇಕ್‌ವೊಂದರಲ್ಲಿ ಬರೆದ ಸಾಲು ಸುದೀಪ್ ಹಾಗೂ ದರ್ಶನ್ ಅಭಿಮಾನಿಗಳ ಮತ್ತೇ ಕಿತ್ತಾಟಕ್ಕೆ ಕಾರಣವಾಗಿದೆ.

ಇದೀಗ ಈ ಸಾಲುಗಳ ಬಗ್ಗೆ ವಿಡಿಯೋ ಮಾಡಿ ನಟ ಪ್ರದೀಪ್ ಅವರು ಕ್ಲಾರಿಟಿ ನೀಡಿದ್ದಾರೆ.  ಸುದೀಪ್ ಮನೆಗೆ ತೆಗೆದುಕೊಂಡ ಹೋದ ಕೇಕ್‌ನಲ್ಲಿ ಬಾಸಿಸಮ್ ಕಾಲ ಮುಗೀತು, ಮಾಕ್ಸಿಮಂ ಕಾಲ ಶುರುವಾಯ್ತು ಎಂದು ಬರೆಯಲಾಗಿತ್ತು. ಈ ಸಾಲು ದರ್ಶನ್ ಹಾಗೂ ಸುದೀಪ್ ಅಭಿಮಾನಿಗಳ ಮಧ್ಯೆ ಸ್ಟಾರ್‌ ವಾರ್‌ಗೆ ಕಾರಣವಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಕಿಚ್ಚ ಹಾಗೂ ದಚ್ಚು ಅಭಿಮಾನಿಗಳ ಮಧ್ಯೆ ಕಿತ್ತಾಟ ಹೆಚ್ಚುತ್ತಿದ್ದ ಹಾಗೇ ಪ್ರದೀಪ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.  

ಪ್ರದೀಪ್‌ ಹೇಲಿಕೆ ಹೀಗಿದೆ:  ಯಾವ ನಟನಿಗೂ ಹೋಲಿಕೆ ಮಾಡಿ ಬರೆದಿದ್ದಲ್ಲ, ಇದು ಮ್ಯಾಕ್ಸ್ ಚಿತ್ರದಲ್ಲಿಯೇ ಬರುವಂತಹ ಸಾಲು.  ಸಿನಿಮಾದ ಹಾಡಿನಲ್ಲಿ ಮ್ಯಾಕ್ಸ್‌ ಮ್ಯಾಕ್ಸಿಮಂ ಮಾಸ್‌.. ಮಾಸ್‌ನಲ್ಲಿ ಮಾಸ್‌ಗೆ ಬಾಸ್ ಎಂದು ಸಾಲು ಬರೆಯಲಾಗಿತ್ತು.  ಈ ಲೈನ್‌ ಅನ್ನು ಅನುವಾದಿಸಿ ಕೇಕ್ ಮೇಲೆ ಬರೆಯಲಾಯಿತು. ಪ್ರತಿಯೊಬ್ಬ ನಾಯಕ ನಟನಿಗೂ ತನ್ನದೇ ಆದ ಬಳಗವಿರುತ್ತದೆ.  ತನ್ನ ಅಭಿಮಾನಿ ಬಳಗ ತನ್ನ ನಾಯಕ ನಟನನ್ನು ಬಾಸ್ ಅಂತಾರೆ, ಅಣ್ಣ ಅಂತಾರೆ, ಸರ್ ಅಂತಾರೆ, ಅವರಿಗೆ ಇಷ್ಟವಾಗುವಂತೆ ತಮ್ಮ ನಾಯಕ ನಟನನ್ನು ಕರೆಯುತ್ತಾರೆ.

ಇಲ್ಲಿ ಬರೆದ ಒಂದು ಪದ ಯಾವುದೇ ನಟನಿಗೆ ಸೀಮಿತವಾಗಿಲ್ಲ ಅನ್ಸುತ್ತೆ. ಪ್ರತಿಯೊಬ್ಬ ಅಭಿಮಾನಿಗೂ ತನ್ನ ನಾಯಕ ನಟನನ್ನು ಹೇಗೆ ಬೇಕೂ ಕರೆಯುವ ಅಭಿಪ್ರಾಯ ಇದ್ದೇ ಇರುತ್ತದೆ.  ಈ ಸಾಲಿನಲ್ಲಿ ಯಾವ ನಟ ಬಗ್ಗೆಯು ಹೇಳಬೇಕೆಂದು ಬರೆದಿದ್ದಲ್ಲ. ಸಿನಿಮಾ ನೋಡಿ ನನಗೆ ಅನ್ಸಿದ್ದನ್ನ ಬರೆದಿದ್ದೇನೆ. ಸುದೀಪ್ ಅವರನ್ನು ಅಭಿನಯ ಚಕ್ರವರ್ತಿ, ಬಾದ್‌ ಶಾ, ಕಿಚ್ಚ ಬಾಸ್ ಅಂತಾರೆ,  ಕಿಚ್ಚ ಬಾಸ್ ಅಲ್ಲ ಇನ್ಮೇಲಿಂದ್ದ ಕಿಚ್ಚ ಮಾಸ್ ಅಂತಾ ಹೇಳುವುದಕ್ಕೆ ಬಯಸಿದ್ದು. ಇದರಲ್ಲಿ ಯಾವುದೇ ಇನ್ನೊಂದು ಅರ್ಥವನ್ನು ಕಲ್ಪಿಸಿಕೊಡುವ ಅವಶ್ಯಕತೆಯಿಲ್ಲ.

ಇದುವರೆಗೂ ನಾನು ಪರ್ಸನಲ್ ಆಗಿ  ಬರೆದಿಲ್ಲ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿಯಾಗಿ ಮದುವೆಗೆ ಆಹ್ವಾನಿಸಿದ ಡಾಲಿ ಧನಂಜಯ್